ಶಾಸಕ ಡಾ.ಅಜಯ್ ಸಿಂಗ್‌ಗೂ ಪಾಸಿಟಿವ್

ಶಾಸಕ ಡಾ.ಅಜಯ್ ಸಿಂಗ್‌ಗೂ ಪಾಸಿಟಿವ್

ಕಲಬುರ್ಗಿ : ಜಿಲ್ಲೆಯಲ್ಲಿ ದಿನಾದಿಂದ ದಿನಕ್ಕೆ ಕೊರೋನಾ ಏರಿಕೆಯಾಗುತ್ತಿದೆ . ಕಲಬುರ್ಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯ್ ಸಿಂಗ್‌ಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಟ್ವಿಟ್ ಮೂಲಕ ಮಾತನಾಡಿ, ನನಗೂ ಕೊರೋನಾ ಪಾಸಿಟಿವ್ ವರದಿಯಿಂದ ತಿಳಿದು ಬಂದಿದೆ.

ಹೀಗಾಗಿ ನನ್ನ ಸಂಪರ್ಕದಲ್ಲಿನ ಪ್ರೈಮರಿ ಕಾಂಟ್ಯಾಕ್ ಹೊಂದಿರುವ ಜನರು ತಪ್ಪದೇ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷೆಗೆ ಒಳಪಟ್ಟು, ಚಿಕಿತ್ಸೆ ಪಡೆಯಲು ಮರೆಯಬೇಡಿ. ನಾನು 2 ವಾರಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲಿದ್ದೇನೆ ಎಂದು ತಿಳಿಸಿದ್ದಾರೆ.

Related