‘ಗೃಹಪ್ರವೇಶ’ಕ್ಕೆ ತಟ್ಟಿದೆ ಕೊರೋನಾ

‘ಗೃಹಪ್ರವೇಶ’ಕ್ಕೆ ತಟ್ಟಿದೆ ಕೊರೋನಾ

ಕಲಬುರ್ಗಿ : ಜಿಲ್ಲೆಯ ಎಲ್ಲ ಪ್ರದೇಶಗಳಲ್ಲಿಯೂ ಸೋಂಕಿತರು ಕಂಡುಬಂದಿದ್ದು, ನಿಯಂತ್ರಣ ತಪ್ಪಲಾರಂಭಿಸಿದೆ. ಸಭೆ, ಸಮಾರಂಭಗಳಿಗೆ ಹೋದವರಿಗೆ ಸೋಂಕು ಬರುತ್ತಿರೋದು ಒಂದೆಡೆಯಾದ್ರೆ, ಮನೆಯಲ್ಲಿದ್ದವರಿಗೂ ಸೋಂಕು ವಕ್ಕರಿಸಿದೆ.

ಗೃಹ ಪ್ರವೇಶಕ್ಕೆಂದು ಹೋದ 12 ಜನರಿಗೆ ಕೊರೋನಾ ಸೋಂಕು ದೃಢಪಟ್ಟ ಘಟನೆ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಆಂದೋಲ ಗ್ರಾಮದಲ್ಲಿ ನಡೆದಿದೆ.

ಮಹಾರಾಷ್ಟ್ರದ ಮುಂಬೈಯಿಂದ ಆಂದೋಲ ಗ್ರಾಮಕ್ಕೆ ವಾಪಸ್ಸಾಗಿದ್ದ ವ್ಯಕ್ತಿ, ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಗೃಹ ಪ್ರವೇಶ ಕಾರ್ಯಕ್ರಮವಾದ ಎರಡು ದಿನಗಳ ನಂತರ ಆತನಿಗೆ ಸೋಂಕಿರೋದು ದೃಢಪಟ್ಟಿತ್ತು. ಈ ಹಿನ್ನಲೆ ಇಡೀ ಆಂದೋಲ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ.

Related