ಮುಂದುವರಿದ ತುಂತುರು ಮಳೆ

ಮುಂದುವರಿದ ತುಂತುರು ಮಳೆ

ಯಾದಗಿರಿ : ಇಂದು ಜಿಲ್ಲೆಯಲ್ಲಿ ತುಂತುರು ಮಳೆ ಮುಂದುವರಿದೆ. ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.
ಭತ್ತ ಮಳೆಗಾಳಿಗೆ ನೆಲಕಚ್ಚಿದೆ. ಸಜ್ಜೆ ಬೆಳೆ ಮೊಳಕೆ ಹೊಡಿದಿವೆ. ಮೆಣಸಿನ ಗಿಡ ನೆಲಬಿಟ್ಟು ಮೇಲೆದ್ದಿಲ್ಲ.

ಶಹಾಪುರದಲ್ಲಿ ಬೆಳಗಿನ ಜಾವ ಉತ್ತಮ ಮಳೆಯಾಗಿದೆ. ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿವೆ. ಹತ್ತಿ ಬೆಳೆಗೆ ಹೆಚ್ಚಿನ ತೊಂದರೆಯಾಗಿದೆ. ತಾಲ್ಲೂಕಿನ ಭೀಮಾ, ಕೃಷ್ಣಾ ನದಿ ದಂಡೆಯ 44 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿ ಕುರಿತು ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಪ್ರಾಮಾಣಿಕವಾಗಿ ವರದಿ ತಯಾರಿಸಿ ಬಡವರಿಗೆ, ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಆಗ್ರಹಿಸಿದ್ದಾರೆ.

Related