ವೃತ್ತಿಪರ ನೇಕಾರರನ್ನು ಪರಿಗಣಿಸಿ

ವೃತ್ತಿಪರ ನೇಕಾರರನ್ನು ಪರಿಗಣಿಸಿ

ರಬಕವಿಬನಹಟ್ಟಿ : ನೇಕಾರಿಕೆಯನ್ನು ಮೂಲ ವೃತ್ತಿಯಾಗಿಸಿಕೊಂಡು ತಲೆಮಾರುಗಳಿಂದ ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸಿರುವ ನೇಕಾರರನ್ನು ಸರಕಾರ ನೇಕಾರ ಕಾರ್ಮಿಕರೆಂದು ಪರಿಗಣಿಸಬೇಕೆಂದು ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಒತ್ತಾಯಿಸಿದರು.

ಕಟ್ಟಡ ಕಾರ್ಮಿಕರನ್ನು ಸರಕಾರ ನೇಕಾರರನ್ನು ವೃತ್ತಿಪರ ಕಾರ್ಮಿಕರೆಂದು ಪರಿಗಣಿಸಿ,  ಸೌಲಭ್ಯಗಳನ್ನು ನೇಕಾರರಿಗೂ ನೀಡಬೇಕು. 55 ವಷ‍್ ಮೇಲ್ಪಟ್ಟ ನೇಕಾರರಿಗೆ ಪ್ರತಿತಿಂಗಳು 5 ಸಾವಿರ ನೀಡಬೇಕು, ನೇಕಾರಿಕೆಯಲ್ಲಿರುವ ಕೂಲಿ ನೇಕಾರ, ವಾರ್ಪಿಂಗ್, ವಾಂಡರ್ ಸುತ್ತುವವರು, ವೈಪಿಂಗ್, ಬಣ್ಣ ಹಾಕುವವರು ಸೇರಿದಂತೆ. ನೇಕಾರಿಕೆ ಪೂರಕ ವೃತ್ತಿಯಲ್ಲಿರುವವರನ್ನು ಸರಕಾರ ಸರ್ವೆ ಮಾಡಿ, ಅವರಿಗೆ ಸೌಲಭ್ಯ ನೀಡಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಎಂದು ತಿಳಿಸಿದರು.

ತಹಶೀಲ್ದಾರ ಪ್ರಶಾಂತ ಚನಗೊಂಡ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ತಲುಪಿಸಲಾಗುವುದು ಎಂದರು. ನಂದು ಗಾಯಕವಾಡ, ಶಿವಾನಂದ ಗುಂಡಿ, ರಾಜೇಂದ್ರ ಮಿರ್ಜಿ, ಭರತ ಕದ್ದಿಮನಿ, ಬಸವರಾಜ ಧಬಾಡಿ, ಸಂತೋಷ ಕೋಪರ್ಡೆ, ಬಸವರಾಜ ನಾಗರಾಳ, ಈರಪ್ಪಾ ಮುದಕವಿ, ರಾಜು ಕುಕ್ಕುಗೋಳ, ಚನ್ನಪ್ಪ ಹುಣಶ್ಯಾಳ ಸೇರಿದಂತೆ ರಬಕವಿ-ಬನಹಟ್ಟಿ ತಾಲೂಕಿನ ನೇಕಾರರು ಇದ್ದರು.

 

Related