ಮರಾಠ ಸಮಾಜದಿಂದ ಸಿಎಂಗೆ ಅಭಿನಂದನೆ

ಮರಾಠ ಸಮಾಜದಿಂದ ಸಿಎಂಗೆ ಅಭಿನಂದನೆ

ಗಜೇಂದ್ರಗಡ : ಪಟ್ಟಣದ ಮಾರುತೇಶ್ವರ ಜೀರ್ಣೋದ್ಧಾರ ಸಮಿತಿ ಹಾಗೂ ತಾಲೂಕು ಮರಾಠ ಸಮಾಜದ ಮುಖಂಡರು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಶಾಸಕ ಕಳಕಪ್ಪ ಬಂಡಿ ಅವರ ಮೂಲಕ ಅಭಿನಂದನಾ ಪತ್ರ ಸಲ್ಲಿಸಿದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವುದರಿಂದ ಮರಾಠ ಸಮಾಜದಲ್ಲಿ ಹಿಂದುಳಿದವರಿಗೆ ಬಹಳ ಅನುಕೂಲವಾಗಲಿದೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಲು ಸಹಾಯವಾಗುತ್ತದೆ. ರಾಜ್ಯದ ಕನ್ನಡಿಗರ ಬಹುದಿನದ ಬೇಡಿಕೆಗೆ ರಾಜ್ಯ ಬಿಜೆಪಿ ಸರ್ಕಾರ ಸ್ಪಂದಿಸುವ ಮೂಲಕ ಮರಾಠ ಸಮಾಜ ಅಭಿವೃದ್ಧಿಗೆ ಮುಂದಾಗಿರುವುದು ಹರ್ಷ ತಂದಿದೆ.

ಈ ಸಂದರ್ಭದಲ್ಲಿ ಮರಾಠ ಸಮಾಜ ಅಧ್ಯಕ್ಷ ವೇಣಪ್ಪ ಇಂಗಳೆ, ಯಮನಪ್ಪ ತಿರುಕೋಜಿ, ಜಗದೀಶ್ ಕಲ್ಗುಡಿ, ರಾಮಣ್ಣ ಮಾಲಗಿತ್ತಿ, ಬಾಳು ಪವಾರ್, ಕಳಕಪ್ಪ ಕಸಾಯಿ, ಕೃಷ್ಣ ಸೂರ್ಯವಂಶಿ, ಶಿವಾಜಿ ಹಾಳಕೇರಿ, ಲಕ್ಷ್ಮಣ ರಾಮಜಿ, ಮುದ್ದಪ್ಪ ಗಡ್ಡದ್, ಮುದ್ದಪ್ಪ ಕಲ್ಗುಡಿ, ಕಳಕಪ್ಪ ಕಸಾಯಿ, ಮಾರುತಿ ರಾಮಜಿ, ರಾಜೇಂದ್ರ ಗೋರ್ಪಡೆ, ಯಂಕಪ್ಪ ಚಾವಣಿ, ಹನುಮಂತ ಗಡ್ಡದ, ಪರಸಪ್ಪ ನಿಂಗೋಜಿ, ಭೀಮಪ್ಪ ಹಾಳಕೇರಿ ಇದ್ದರು.

Related