ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆುಲ್ಲಿ ಕಗ್ಗಂಟು!

ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆುಲ್ಲಿ ಕಗ್ಗಂಟು!

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಇನ್ನೇನು ಮೂರೇ ದಿನ ಬಾಕಿ ಇದ್ದು, ಇದುವರೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮವಾಗಿಲ್ಲ.

ಹೌದು, ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕಾಂಗ್ರೆಸ್ ಪಕ್ಷವು ಇನ್ನೂ ಘೋಷಣೆ ಮಾಡಿಲ್ಲ ಆದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯು ಇನ್ನೂ ಕಗ್ಗಂಟಾಗಿ ಉಳಿದಿದೆ ಎಂದು ತಿಳಿದುಬಂದಿದೆ.

ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಹೈಕಮಾಂಡ್ ನಿಂದಲೇ ಹೊರ ರಾಜ್ಯದ ಒಂದು ಅಭ್ಯರ್ಥಿಯ ಫೈನಲ್ ಆಗುವ ಸಾಧ್ಯತೆ ಇದೆ. ಅಭಿಷೇಕ್ ಮನು ಸಿಂಘ್ವಿ ಅಥವಾ ರಘುರಾಂ ರಾಜನ್ ರಾಜ್ಯಸಭೆ ಅಭ್ಯರ್ಥಿ ಆಗುವ ಸಾಧ್ಯತೆ ಇದೆ.

ಫೆ.15ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೂರು ಸ್ಥಾನ ಭರ್ತಿ ಮಾಡಿಕೊಳ್ಳಲು ಕಾಂಗ್ರೆಸ್​ಗೆ ಅವಕಾಶವಿದೆ. ಪ್ರಸ್ತುತ 20ಕ್ಕಿಂತ ಹೆಚ್ಚು ಆಕಾಂಕ್ಷಿಗಳು ಮುಂದೆ ಬಂದಿದ್ದು, ವಿವಿಧ ಕೋಟಾದಡಿ ಬೇಡಿಕೆ ಮುಂದಿಟ್ಟಿದ್ದಾರೆ.

ಮಠ ಮಾನ್ಯಗಳಿಂದ, ಉದ್ಯಮಿಗಳಿಂದ ಒತ್ತಡ ಹೇರಲಾರಂಭಿಸಿದ್ದಾರೆ. 3 ಸ್ಥಾನಗಳ ಪೈಕಿ ಒಂದು ಸ್ಥಾನ ಅಲ್ಪಸಂಖ್ಯಾತರಿಗೆ, ಒಂದು ಒಕ್ಕಲಿಗ ಮತ್ತೊಂದು ಪರಿಶಿಷ್ಟರಿಗೆ ಕೊಡಬೇಕೆಂದು ಚರ್ಚೆಯಾಗಿದೆ. ಅಲ್ಪಸಂಖ್ಯಾತ ಕೋಟಾದಿಂದ ಹಾಲಿ ಸದಸ್ಯ ನಾಸೀರ್ ಹುಸೇನ್ ಪುನರಾಯ್ಕೆ ಬಯಸಲಿದ್ದು, ಹೈಕಮಾಂಡ್ ಕಡೆಯಿಂದ ಭರವಸೆಯೂ ಸಿಕ್ಕಿದೆ. ಆದರೆ, ಕೊನೆ ಹಂತದ ಬದಲಾವಣೆ ಹೊರತುಪಡಿಸಿ ನಾಸೀರ್ ಪುನಃ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

Related