ಇನ್ಮುಂದೆ ಬಿಬಿಎಂಪಿಯಲ್ಲಿ ಮಾಧ್ಯಮಗಳಿಗೆ ಸಂಪೂರ್ಣ ನಿರ್ಬಂಧ!?

ಇನ್ಮುಂದೆ ಬಿಬಿಎಂಪಿಯಲ್ಲಿ ಮಾಧ್ಯಮಗಳಿಗೆ ಸಂಪೂರ್ಣ ನಿರ್ಬಂಧ!?

ಬೆಂಗಳೂರು: ಎಲ್ಲರಿಗೂ ತಿಳಿದಿರುವ ಸಂಗತಿ ಎಂದರೆ ಮಾಧ್ಯಮ ಎಂಬುವುದು ಅದು ಒಂದು ಸಂವಿಧಾನದಲ್ಲಿ ನಾಲ್ಕನೆಯ ಅಂಗವಾಗಿದೆ.

ಆದರೆ ಬೆಂಗಳೂರು ನಗರದಲ್ಲಿ ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಇನ್ನು ಮುಂದೆ ನಾನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಹೌದು, ವಿಧಾನಸೌಧದ ಕಾರ್ಯಕಲಾಪ ವೇಳೆ ಚಿತ್ರಿಕರಣ ಮಾಡದಂತೆ ನಿರ್ಬಂದ ಹೇರಿ ದಮನಕಾರಿ ನೀತಿ ಅನುಸರಿಸಿದ್ದ ಸರ್ಕಾರ ದ ಮುಂದುವರೆದ ಭಾಗ ಎನ್ನುವಂತೆ ಇದೀಗ ಬಿಬಿಎಂಪಿ ಆಡಳಿತ ಮಾದ್ಯಮಗಳ ವಿಷಯದಲ್ಲಿ ನಕಾರಾತ್ಮಕ ಧೋರಣೆ ಅನು ಸರಿಸ್ಲಿಕ್ಕೆ ಮುಂದಾಗಿದೆ. ಲೋಕಲ್ ಗವರ್ನ್ಮೆಂಟ್ ಆಗಿ ಕೆಲಸ ಮಾಡುವ ಬಿಬಿಎಂಪಿಯಲ್ಲಿ ಏನೆಲ್ಲಾ ವಿದ್ಯಾಮಾನಗಳು ನಡೆಯುತ್ತಿವೆ ಎನ್ನುವುದರ ಬಗ್ಗೆ ಸುದ್ದಿ ನೀಡುವುದರಿಂದ ಹಿಡಿದು ಅದರ ಬಗ್ಗೆ ಪ್ರತಿಕ್ರಿಯಿಸ್ಲಿಕ್ಕೂ ಮುಖ್ಯ ಆಯುಕ್ತ ತುಷಾರಗಿರಿನಾಥ್ ನಿರಾಕರಿಸ್ಲಿಕ್ಕೆ ಮುಂದಾಗಿದ್ದಾರೆ. ಇದು ಪತ್ರಿಕಾಸಮೂಹವನ್ನು ಕೆಂಡಾಮಂಡಲಗೊಳಿಸಿದೆ.

ಬಿಬಿಎಂಪಿ ಎಲ್ಲರಿಗೂ ತಿಳಿದಿರುವಂತೆ ಸ್ಥಳೀಯ ಸರ್ಕಾರವಾಗಿ ಕೆಲಸ ಮಾಡುತ್ತದೆ. ಅಲ್ಲಿನ ನಿತ್ಯದ ವಿದ್ಯಾಮಾನಗಳನ್ನು ಸಾರ್ವಜನಿಕವಾಗಿ ತಿಳಿಸುವ ಹೊಣೆಗಾರಿಕೆ ಮಾದ್ಯಮಗಳದ್ದು. ಮೊನ್ನೆಮೊನ್ನೆವರೆಗೂ ಬಿಬಿಎಂಪಿ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ಕೊಡುತ್ತಿದ್ದ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದಾರೆ. ಇನ್ಮುಂದೆ ನಾನು ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ರಿಯಾಕ್ಟ್ ಮಾಡುವುದಿಲ್ಲ.. ಅಷ್ಟೇ ಎಲ್ಲ ಯಾವ ಅಧಿಕಾರಿನೂ ನಿಮಗೆ ಬೈಟ್ ಕೊಡೋದಿಲ್ಲ ಎಂದಿದ್ದಾರಂತೆ. ಇದರಿಂದ ಮಾದ್ಯಮ ಪ್ರತಿನಿಧಿಗಳು ಕೆಂಡಾಮಂಡಲಗೊಂಡಿದ್ದಾರೆ.

ಹಾಗೆ ನೋಡಿದ್ರೆ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಸ್ವಭಾವತಃ ದುಷ್ಟರೇನಲ್ಲ. ಮಾದ್ಯಮಸ್ನೇಹಿ ಎಂದೇ ಕರೆಯಿಸಿಕೊಳ್ತಾರೆ. ಆದರೆ ಇದ್ದಕ್ಕಿದ್ದಂತೆ ಮಾದ್ಯಮಗಳಿಗೆ ಪ್ರತಿಕ್ರಯಿಸೊಲ್ಲ ಎಂದಿರುವುದು ಸಹಜವಾಗೇ ಬೇಸರ-ಆಕ್ರೋಶ ಮೂಡಿಸಿದೆ. ತುಷಾರ ಗಿರಿನಾಥ್ ಹೀಗೆ ಹೇಳೊಕ್ಕೆ ಸರ್ಕಾರದ ಆದೇಶವೇ ಕಾರಣ ಎನ್ನಲಾಗುತ್ತಿದೆ. ನೀವು ಯಾವುದಕ್ಕೂ ರಿಯಾಕ್ಟ್ ಮಾಡುವಂತಿಲ್ಲ. ರಿಯಾಕ್ಟ್ ಮಾಡಬೇಕೆನ್ನುವುದೇ ಆದಲ್ಲಿ ನಮ್ಮ ಅನುಮತಿ ಅವಶ್ಯಕ ಎಂದು ಫರ್ಮಾನ್ ಹೊರಡಿಸಲಾಗಿದೆ ಎನ್ನಲಾಗ್ತಿದೆ.

ಮಾದ್ಯಮಗಳಿಗೆ ರಿಯಾಕ್ಟ್ ಮಾಡದಂತೆ ನಿಜಕ್ಕೂ ಸರ್ಕಾರ ತುಷಾರ ಗಿರಿನಾಥ್ ಮೇಲೆ ಒತ್ತಡ ಹೇರುತ್ತಿದೆ ಎನ್ನುವುದಾದ್ರೆ ಅದು ಸರಿಯಾದ ಕ್ರಮವಲ್ಲ. ಮಾದ್ಯಮಗಳಿಗಿರುವ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದೆಯಲ್ಲದೇ ಒಬ್ಬ ಹಿರಿಯ ಐಎಎಸ್ ಅಧಿಕಾರಿಯ ಸ್ವಾತಂತ್ರ್ಯವನ್ನು ಕಸಿದುಕೊಂಡಂತಾಗುತ್ತದೆ. ಈ ವಿಷಯದಲ್ಲಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಲೇಬೇಕಿದೆ.

Related