ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ದೂರು..!?

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ದೂರು..!?

ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳ ಬಾಕಿ ಇದ್ದು ಎಲ್ಲಾ ಪಕ್ಷದ ಅಭ್ಯರ್ಥಿಗಳು ಭರ್ಜರಿ ಮತ ಪ್ರಚಾರ ಮಾಡುತ್ತಿದ್ದಾರೆ.

ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಶೋಭಾ ಕರಂದ್ಲಾಜೆ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಭಾಷಣ ಮಾಡಲು ಅವಕಾಶ ನೀಡಬಾರದೆಂದು ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಶೋಭಾ ಕರಂದ್ಲಾಜೆ ಅವರು ಭಾಷಣ ಮಾಡುವ ಸಂದರ್ಭದಲ್ಲಿ ಜಾತಿ, ಜಾತಿಗಳಲ್ಲಿ ಭಿನ್ನತೆಯನ್ನು ಮೂಡಿಸುತ್ತಿದ್ದಾರೆ ಹಾಗಾಗಿ ಅವರಿಗೆ ಈ ಲೋಕಸಭಾ ಚುನಾವಣೆಯಲ್ಲಿ ಭಾಷಣ ಮಾಡಲು ಅವಕಾಶ ನೀಡಬಾರದು ಎಂದು ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಕಾರ್ಯಕರ್ತರು ದೂರನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ  ಸಚಿವೆ ಶೋಭಾ ಕರಂದ್ಲಾಜೆ ಅವರ ಬಹಿರಂಗ ಪ್ರಚಾರ ಮತ್ತು ಭಾಷಣಗಳಿಗೆ ನಿರ್ಭಂದಿಸುವಂತೆ ರಾಜ್ಯ ಕಾಂಗ್ರೆಸ್ ಮುಖಂಡ ಕುಶಾಲ್​ ಹರುವೇಗೌಡ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವು ಹಿಂದೂ- ಮುಸ್ಲಿಂ-ಕ್ರೈಸ್ತರು ಎಂಬ ಬೇಧ-ಭಾವವಿಲ್ಲದೆ, ಜಾತಿ-ಮತ-ಪಂಥಗಳನ್ನು ಮೀರಿ ಜನರು ಸಹೋದರತ್ವದಿಂದ ವಾಸಿಸುತ್ತಿದ್ದಾರೆ. ಇಂತಹ ಶಾಂತಿ ಸೌಹಾರ್ದತೆಯ ಬೀಡು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದಿಂದ ಪ್ರಚೋದನಕಾರಿ ಭಾಷಳಿಗೆ ಕೋಮು ಗಲಭೆಗಳಿಗೆ ಕುಖ್ಯಾತರಾಗಿರುವ ಶೋಭಾ ಕರಾಂದ್ಲಾಜೆ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಜನರಲ್ಲಿ ಆತಂಕ ಬಹಳಷ್ಟು ಮೂಡಿಸಿದೆ.

ಅವರ ರಾಜಕೀಯ ಇತಿಹಾಸದೂದ್ದಕ್ಕೂ ಶಾಂತಿ-ಸೌಹಾರ್ದತೆ ಕದಡುವಂತಹ ಕೋಮುಗಲಭೆಗೆ ಪ್ರಚೋದಿಸುವಂತಹ ಭಾಷಣಗಳಿಂದಲೇ ಕುಖ್ಯಾತಿ ಹೊಂದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರದಲ್ಲಿ ಭಾಷಣಕ್ಕೆ ಅವಕಾಶ ನೀಡದೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಾದ್ಯಂತ ಇಂತಹ ದುರ್ಘಟನೆಗಳು ಆಗದಂತ ಮುನ್ನೆಚ್ಚರಿಕೆ ವಹಿಸಿ ಶೋಭಾ ಕರಂದ್ಲಾಜೆ ಅವರ ಚುನಾವಣಾ ಭಾಷಣಗಳಿಗೆ ಅನುಮತಿ ನೀಡದೆ ನಿರ್ಬಂಧಿಸಬೇಕೆಂದು ಜಿಲ್ಲಾ ಕಾರ್ಯದರ್ಶಿ ಕುಶಾಲ್ ಹರುವೆಗೌಡ ಮತ್ತು ಸಂಜಯ್ ದೂರು ನೀಡಿದ್ದಾರೆ.

Related