ಪಕ್ಷ ಬಲವರ್ಧನೆಗೆ ಸಮಿತಿ ರಚನೆ

ಪಕ್ಷ ಬಲವರ್ಧನೆಗೆ ಸಮಿತಿ ರಚನೆ

ಬೆಂಗಳೂರು : ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಬಲಪಡಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದಲ್ಲಿ ಅಸಮಾಧಾನಗೊಂಡು ಪಕ್ಷ ಬಿಟ್ಟು ತೆರಳಿದ ಮುಖಂಡರನ್ನು ಮತ್ತೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಸಮಿತಿಯನ್ನು ರಚನೆ ಮಾಡಿದ್ದಾರೆ. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ.

ಬೇರೆ ಬೇರೆ ಕಾರಣಗಳಿಂದ ಅಸಮಾಧಾನಗೊಂಡು ಪಕ್ಷವನ್ನು ಬಿಟ್ಟು ಹೋದ ಮುಖಂಡರ ಜೊತೆಗೆ ಈ ಸಮಿತಿ ಚರ್ಚೆ ನಡೆಸಲಿದೆ. ಅವರಿಗೆ ಮತ್ತೆ ಕಾಂಗ್ರೆಸ್‌ಗೆ ವಾಪಸ್ ಆಗಬೇಕು ಎಂಬ ಮನಸ್ಸಿದ್ದರೆ ಸಮಿತಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಕೆಪಿಸಿಸಿಗೆ ವರದಿ ನೀಡಲಿದೆ.

ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಎ ಹಸನಬ್ಬ ಸಂಚಾಲಕರಾಗಿದ್ದಾರೆ. ವಿ. ಮುನಿಯಪ್ಪ, ಅಜಯ ಕುಮಾರ್ ಸರ್ ನಾಯಕ್, ಅಭಯಚಂದ್ರ ಜೈನ್, ಆರ್. ದ್ರುವನಾರಾಯಣ, ಬಿ.ಎನ್ ಚಂದ್ರಪ್ಪ,ವಿ.ವೈ ಘೋರ್ಪಡೆ, ಸಂಪತ್‌ರಾಜ್, ಸತೀಶ್ ಶೈಲ್, ಕೃಪಾ ಆಳ್ವ, ಪ್ರಫುಲ್ಲಾ ಮಧುಕರ್ ಮುಂತಾದ ಸದಸ್ಯರನ್ನು ಈ ಸಮಿತಿ ಒಳಗೊಂಡಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಆಯ್ಕೆಯಾದ ಬಳಿಕ ಹಂತ ಹಂತವಾಗಿ ಪಕ್ಷದ ಬಲವರ್ಧನೆಗೆ ಮುಂದಾಗಿದ್ದಾರೆ. ಆಂತರಿಕ ಭಿನ್ನಮತವನ್ನು ಸರಿಪಡಿಸುವುದರ ಜೊತೆಗೆ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುವುದು ಇವರ ತಂತ್ರಗಾರಿಕೆಯಾಗಿದೆ.

Related