ಸರ್ವತೋಮುಖ ಅಭಿವೃದ್ಧಿಗೆ ಬದ್ಧ :ಶಡಿಸಿಜಿ

ಸರ್ವತೋಮುಖ ಅಭಿವೃದ್ಧಿಗೆ ಬದ್ಧ :ಶಡಿಸಿಜಿ

ತುಮಕೂರು : ಗ್ರಾಮಾಂತರ ಕ್ಷೇತ್ರ ಹೆಬ್ಬೂರು ಹೋಬಳಿ ಚಿಕ್ಕಣ್ಣ ಸ್ವಾಮಿ ದೇವಾಲಯದ ಸರ್ವತೋಮುಖ ಅಭಿವೃದ್ದಿಗೆಬದ್ದನಾಗಿದ್ದೇನೆ ಎಂದು ಗ್ರಾಮಾಂತರ ಶಾಸಕರಾದ ಡಿಸಿ ಗೌರೀಶಂಕರ್ ತಿಳಿಸಿದರು.

ಹೆಬ್ಬೂರು ಹೋಬಳಿ ಚಿಕ್ಕಣ್ಣ ಸ್ವಾಮಿ ದೇವಾಲಯದ ಬಳಿ 50ಲಕ್ಷವೆಚ್ಚದ ಸಿಸಿ ರಸ್ತೆ ಹಾಗೂ ಬಾಕ್ಸ್ ಚರಂಡಿ ಕಾಮಗಾರಿ, ವಿರುಪಸಂದ್ರ ಗ್ರಾಮದಲ್ಲಿ 40 ಲಕ್ಷ ವೆಚ್ಚದಲ್ಲಿಸಿಸಿ ರಸ್ತೆ ಹಾಗು ಚರಂಡಿ,ಹೊನ್ನೇನಹಳ್ಳಿ ಗ್ರಾಮದಲ್ಲಿ 15 ಲಕ್ಷ ವೆಚ್ಚದ ಸಿಸಿ ರಸ್ತೆ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ದಿ ಪರ್ವ ನಡೆಯುತ್ತಿದೆ, ಅಭಿವೃದ್ದಿಯಿಂದವಂಚಿತವಾಗಿದ್ದ  ಗ್ರಾಮಗಳನ್ನು ಗುರುತಿಸಿ ಆದ್ಯತೆಯ ಮೇಲೆ ಅಭಿವೃದ್ದಿಕಾಮಗಾರಿಗಳನ್ನುಕೈಗೆತ್ತಿಕೊಳ್ಳಲಾಗಿದೆ,ಗ್ರಾಮಾಂತರಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸುವುದೇ ನನ್ನ ಮುಖ್ಯ ಗುರಿ ಎಂದರು.

ಹೆಬ್ಬೂರು ಬಳಿ ಇರುವ ಚಿಕ್ಕಣ್ಣ ಸ್ವಾಮಿ ಸನ್ನಿಧಿ ಪವಿತ್ರ ಕ್ಷೇತ್ರ , ಈ ಸನ್ನಿಧಾನಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೇಹೆಚ್ಚುತ್ತಿದ್ದು,ಜಾತ್ರೆಯ ವೇಳೆ ಅಪಾರ ಪ್ರಮಾಣದ ಭಕ್ತರುಸೇರುತ್ತಾರೆ, ಈ ಕ್ಷೇತ್ರದಲ್ಲಿ 50 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದರೆ, ಗ್ರಾಮಾಂತರ ಕ್ಷೇತ್ರದಲ್ಲಿ ಒಂದೇ ಒಂದು ಕಾಮಗಾರಿ ಬಾಕಿ ಉಳಿಸುತ್ತಿರಲಿಲ್ಲ,ಆದರೆ ಈ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಾಮಗಾರಿಗಳಿಗೆ  ಅನುದಾನಬಿಡುಗಡೆಯಾಗುತ್ತಿಲ್ಲ, ಬಿಡುಗಡೆಯಾದಅನುದಾನಗಳನ್ನು ತಡೆಹಿಡಿದು ದ್ವೇಶದ ರಾಜಕಾರಣ ಮಾಡಲಾಗುತ್ತಿದೆ ಎಂದು ಗುಡುಗಿದರು.

ಈ ವೇಳೆ ಚಿಕ್ಕಣ್ಣ ಸ್ವಾಮಿ ದೇವಸ್ತಾನದಧರ್ಮದರ್ಶಿಗಳಾದ ಡಾ. ಪಾಪಣ್ಣಸ್ವಾಮಿಗಳು, ತಾಲ್ಲೂಕು ಅಧ್ಯಕ್ಷ ಹಾಲನೂರು ಅನಂತಕುಮಾರ್, ಜೆಡಿಎಸ್ ಮುಖಂಡರಾದಕೆ.ಬಿ.ರಾಜಣ್ಣ, ತಾ.ಪಂ ಸದಸ್ಯರಾದ ರಂಗಸ್ವಾಮಯ್ಯ, ಶಿವಶಂಕರ್, ಆಂಜಿನಪ್ಪ, ನರೇಂದ್ರ, ಕೃಷ್ಣಪ್ಪ, ವೆಂಕಟೇಶ್,ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಾಮಚಂದ್ರಪ್ಪ ಸಾಸಲು ಮೂರ್ತಿ ಉಪಸ್ತಿತರಿದ್ದರು.

Related