ಹಾಸ್ಯ ನಟ ಮೈಕಲ್ ವಿಧಿವಶ

ಹಾಸ್ಯ ನಟ ಮೈಕಲ್ ವಿಧಿವಶ

ಬೆಂಗಳೂರು: ಕನ್ನಡ ನಿಮಿಮಾಗಳಲ್ಲಿ ನಕ್ಕುನಗಿಸುವ ಪಾತ್ರವೆಂದರೆ ಅದು ಹಾಸ್ಯ ನಟರೆಂದು ಹೇಳಬಹುದು. ನಮ್ಮ ನಕ್ಕು ನಗಿಸಿದ ಜೀವವದು ಹಲವು ಸಿನೆಮಾಗಳಲ್ಲಿ ಅಭಿನಯಿಸಿರುವ ಹಾಸ್ಯ ನಟ. ಅವರು ತೆರೆಯ ಮೇಲೆ ಕಂಡರೆಂದರೆ ಎಲ್ಲಿಲ್ಲದ ನಗು ಖುಷಿ.

ಹೌದು  ಹಾಸ್ಯ ನಟ ಮೈಕಲ್ ಮಧು ಅವರು ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿಯಿಸಿದ್ದರು ಅವರ ನಟನೆ ಬಗ್ಗೆ ಮತ್ತೊಂದು ಮಾತಿಲ್ಲ ಅಕ್ಷಯ ಪಾತ್ರೆಯೆ ನನಗೆ ಶ್ರೀರಕ್ಷೆ ಎನ್ನುವ ಮೈಕಲ್ ಮಧು  ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು, ಮೈಕಲ್​ ಮಧು ಮನೆಯಲ್ಲಿ ಕಾಲು ಜಾರಿ ಬಿದ್ದು ಅಸ್ವಸ್ಥರಾಗಿದ್ದ ಹಿನ್ನೆಲೆ ಅವರನ್ನು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿತ್ತು.

ಕನ್ನಡ ಚಿತ್ರರಂಗ ಮತ್ತೋರ್ವ ಹಾಸ್ಯ ನಟನನ್ನು ಕಳೆದುಕೊಂಡಿದೆ. ಕನ್ನಡದ ಸೂಪರ್ ಹಿಟ್ ಸಿನಿಮಾ ಸೂರ್ಯವಂಶ, ಓಂ, ಶ್, ಯಜಮಾನ, ಓ ನನ್ನನಲ್ಲೇ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಮೈಕಲ್​ ಮಧು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಶಿವರಾಜ್​​ ಕುಮಾರ್​ ನಟನೆಯ ಓಂ ಚಿತ್ರದ ಮೂಲಕ ಮೈಕಲ್​ ಮಧು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು.

 

Related