`ಝೀರೋ ಟ್ರಾಫಿಕ್’ ಬೇಡ ಎಂದ ಸಿಎಂ 

`ಝೀರೋ ಟ್ರಾಫಿಕ್’ ಬೇಡ ಎಂದ ಸಿಎಂ 

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಅವರು ಸಂಚರಿಸುವ ರಸ್ತೆಗಳಲ್ಲಿ ಭದ್ರತೆಗಾಗಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ನೀಡಬಾರದೆಂದು ಶನಿವಾರ  ಸೂಚನೆ ನೀಡಿದ್ದಾರೆ.

ಸಭೆ ಸಮಾರಂಭಗಳಲ್ಲಿ ಹಾರಾ, ತುರಾಯಿ ಹಾಕಬಾರದೆಂದು ಸೂಚನೆಯ ಬೆನ್ನಲ್ಲೇ ಸಿ.ಎಂ ಬೊಮ್ಮಾಯಿ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಸಾರ್ವಜನಿಕರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಲು ತಾವು ಮನೆಯಿಂದ ಹೊರಡುವಾಗ ಅಥವಾ ಅಧಿಕೃತ ಕಾರ್ಯಕ್ರಮಕ್ಕೆ ಹೋಗುವ ಸಂದರ್ಭದಲ್ಲಿ ಭದ್ರತೆಗಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ ನೀಡಬಾರದು ಎಂದು ಸೂಚನೆ ನೀಡಿದ್ದಾರೆ. ನಾನು ಸಾಮಾನ್ಯ ಪ್ರಜೆಯಂತೆ ವಾಹನದಲ್ಲಿ ಸಂಚರಿಸುತ್ತೇನೆ. ಹೀಗಾಗಿ ನನಗೆ ಝೀರೋ ಟ್ರಾಫಿಕ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Related