ಸಿಎಂ ದಾಸೋಹ ದಿನ ಘೋಷಣೆ

ಸಿಎಂ ದಾಸೋಹ ದಿನ ಘೋಷಣೆ

ತುಮಕೂರು : ನಾನು ಶಿವಕುಮಾರ ಸ್ವಾಮೀಜಿಯವರನ್ನು ಭೇಟಿ ಆದಾಗ ನನ್ನ ಅವರ ಕೊಠಡಿಗೆ ಕರೆದುಕೊಂಡು ಹೋಗಿ ಸಲಹೆಗಳನ್ನು  ಕೊಡುತ್ತಿದ್ದರು  ಎಂದು ಮುಖ್ಯಮಂತ್ರಿ  ಬಿ.ಎಸ್  ಯಡಿಯೂರಪ್ಪ  ಸ್ಮರಿಸಿದರು.

ಶಿವಕುಮಾರ ಸ್ವಾಮೀಜಿ ಅವರ ಎರಡನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಗಳು ಯುಗಪುರುಷ ಬಸವಣ್ಣ ಅವರ ಕಾಯಕ ಮತ್ತು ದಾಸೋಹ ತತ್ವದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಎಲ್ಲ ಜಾತಿ ಧರ್ಮಗಳ ಜನರಿಗೂ ಶಿಕ್ಷಣ ಆಶ್ರಯ ನೀಡಿದರು. ಇಲ್ಲಿ ಕಲಿತವರು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ ಎಂದು ಪ್ರಶಂಸಿಸಿದರು.

ಜೀವನದಲ್ಲಿ ನೀನು ಒಬ್ಬನೇ ಸಾಧಿಸಿ ಮೇಲೆ ಬರುವುದಕ್ಕಿಂತ 10 ಜನರನ್ನು ಮೇಲೆತ್ತು ಎಂದ ಸ್ವಾಮೀಜಿ ಅವರ ಮಾತು ಮತ್ತು ನಡೆ ಲಕ್ಷಾಂತರ ವಿದ್ಯಾರ್ಥಿಗಳಿಗೆ  ಬದುಕು ಕಟ್ಟಿಕೊಟ್ಟಿದೆ. ಸ್ವಾಮೀಜಿ ಭೌತಿಕವಾಗಿ ಇಲ್ಲ ಅಷ್ಟೇ. ಅವರ ಕೆಲಸ ಜೀವಂತ. ಸಿದ್ಧಲಿಂಗ ಸ್ವಾಮೀಜಿ ಅವರೂ ಶಿವಕುಮಾರ ಸ್ವಾಮೀಜಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.

ಶಿವಕುಮಾರ ಸ್ವಾಮೀಜಿ ವಸ್ತುಸಂಗ್ರಹಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ್ದರು. ಅದಕ್ಕೆ  10 ಕೋಟಿ ಬೇಕಿದೆ. ಅದನ್ನು ಬಿಡುಗಡೆ ಮಾಡುವೆ ಎಂದು ಭರವಸೆ ನೀಡಿದರು.

Related