ತವರು ಜಿಲ್ಲೆಯಲ್ಲಿ ಪ್ರಚಾರ ಅಖಾಡಕ್ಕಿಳಿದ ಸಿಎಂ

ತವರು ಜಿಲ್ಲೆಯಲ್ಲಿ ಪ್ರಚಾರ ಅಖಾಡಕ್ಕಿಳಿದ ಸಿಎಂ

ಮೈಸೂರು: ಲೋಕಸಭಾ ಚುನಾವಣೆಯ ಕಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಂಗಿರುತ್ತಿದ್ದು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆಯಾದ ಮೈಸೂರಿನಲ್ಲಿ ಖುದ್ದು ಅವರೇ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ಕೈಗೊಂಡಿದ್ದಾರೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಪ್ರಚಾರವನ್ನು ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಾರಿ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಎಲ್ಲ ರೀತಿಯ ತಯಾರು ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಮೈಸೂರು ಹಾಗೂ ಚಾಮರಾಜನಗರ ಎರಡೂ ಕ್ಷೇತ್ರಗಳನ್ನ ಮರಳಿ ಪಡೆಯಲು ಸ್ಥಳೀಯ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಎರಡೂ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಬೇಕಾದ ಮಾನದಂಡಗಳ ಬಗ್ಗೆ ಚರ್ಚಿಸಿದ್ದಾರಂತೆ. ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ವಿರುದ್ಧ ಸ್ಪರ್ಧಿಸಿರುವ ಲಕ್ಷ್ಮಣ್ ಗೆಲ್ಲಿಸಿಕೊಳ್ಳಲು ಒಕ್ಕಲಿಗ ಮತಗಳನ್ನ ಸೆಳೆಯಲು ಭಾರೀ ರಣತಂತ್ರ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.

 

Related