ರಾಮನಗರ: ಮೌಲ್ಯದೊಂದಿಗೆ ಶಿಕ್ಷಣವನ್ನ ಕೊಡುವ ನಿಟ್ಟಿನಲ್ಲಿ ಪರಿಶ್ರಮಿಸುತ್ತಿರುವ ನಗರದ ಹೆಸರಾಂತ ಶಿಕ್ಷಣ ಸಂಸ್ಥೆ ಹೋಲಿ ಕ್ರೆಸೆಂಟ್ ಶಿಕ್ಷಣ ಸಂಸ್ಥೆ ಶಾಲಾ ವಾರ್ಷಿಕೋತ್ಸವವನ್ನು “ಕಲಿಕೋತ್ಸವ 2025” ಹೆಸರಿನಲ್ಲಿ ಪಠ್ಯದ ಒಳಗೆ ಇರುವ ಕಲಿಕಾಂಶಗಳನ್ನೇ ಮನರಂಜನಾತ್ಮಕವಾಗಿ ಹಾಡು ನೃತ್ಯ ನಾಟಕವಾಗಿ ಮರು ಸಂಯೋಜಿಸಿ ಮಕ್ಕಳಿಗೆ ಮನರಂಜನೆ ಸೃಜನಶೀಲತೆಯನ್ನು ಒಟ್ಟೊಟ್ಟಿಗೆ ಉಂಟುಮಾಡುವ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಸಂಸ್ಥೆಯ ಕಾರ್ಯದರ್ಶಿಗಳಾದ ಅಲ್ತಾಫ್ ಅಹಮದ್ ಹಾಗೂ ಅಧ್ಯಕ್ಷರಾದ ಶ್ರೀಮತಿ ಡಾ. ಷಾಜಿಯಾ ಅಲ್ತಾಫ್ ಅಹಮದ್ ಅವರು ಅನುಷ್ಠಾನಿಸಿದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಮನಗರ ತಾಲೂಕಿನ ನಿಕಟಪೂರ್ವ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಜಿ ಎಸ್ ಸಂಪತ್ ಕುಮಾರ್ ಶಿಕ್ಷಣ ಎಂಬುದು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಹಾಗೂ ಗೆಳೆಯರು ಎಂಬ ನಾಲ್ಕು ಪ್ರಧಾನ ಆಧಾರ ಸ್ಥಂಭಗಳ ಮೇಲೆ ನಿಂತಿರುವ ಸುಂದರ ಸೌಧವಾಗಿದೆ, ಈ ನಾಲ್ಕು ಆಧಾರ ಸ್ತಂಭಗಳ ಸಾಂವಿಧಾನಿಕವಾದ ಪ್ರಯತ್ನದಿಂದ ಮಾತ್ರ ಅರ್ಥಪೂರ್ಣವಾದ ಸಾರ್ಥಕ ಶಿಕ್ಷಣವನ್ನ ಕೊಡಮಾಡಲು ಸಾಧ್ಯವಾಗುತ್ತದೆ, ಈ ನಾಲ್ವರು ಅವರವರ ಪಾತ್ರವನ್ನು ಬಹಳ ಸೊಗಸಾಗಿ ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ʼಮಕ್ಕಳ ಮನೆ ಇಸ್ಕೂಲ್ ಅಲ್ವೇʼ ಪಠ್ಯಪುಸ್ತಕಗಳು ರಾಷ್ಟ್ರೀಯ ಮೌಲ್ಯವನ್ನು ಪ್ರಜಾಸತ್ತಾತ್ಮಕ ಗುಣಗಳನ್ನು ಇತಿಹಾಸ ಪರಂಪರೆ ಸಂಸ್ಕೃತಿ ಮೌಲ್ಯಗಳನ್ನು ತಿಳಿಸುವ ಸಂಗತಿಗಳನ್ನು ಅಡಕಗೊಂಡಿರುವುದರಿಂದ ಪಠ್ಯಪುಸ್ತಕಗಳ ಆಧಾರಿತವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಪ್ರಸಕ್ತ ಸಮಾಜದಲ್ಲಿನ ಯುವ ತಲೆ ಮಾರಿನ ಅಭಿರುಚಿಗಳ ತಿದ್ದುಪಡಿಗೆ ಪೂರಕವಾಗಿದೆ. ನಾಡಿನ ದೇಶದ ಮೌಲ್ಯ ಪರಂಪರೆಯ ಬೇರುಗಳು ಪಠ್ಯಪುಸ್ತಕಗಳಲ್ಲಿ ಅಡಕವಾಗಿರುವುದರಿಂದ ಶಾಲಾ ಶಿಕ್ಷಣ ಅನುಷ್ಠಾನಿಸುವಲ್ಲಿ ಪೋಷಕರು ಶಿಕ್ಷಕರು ವಿದ್ಯಾರ್ಥಿಗಳು ಗೆಳೆಯರು ಏಕೋಭಾವದಿಂದ ಅನುದಿನದ ಅನು ಕ್ಷಣದ ಬದುಕಿನಲ್ಲಿ ಶಿಕ್ಷಣದ ಕುರಿತಾದ ಧ್ಯಾನ ಮನ ಹೊಂದುವುದು ಅತ್ಯಂತ ತುರ್ತಿನ ಕ್ರಮವಾಗಿದೆ ಎಂದು ನುಡಿದರು.
ಪ್ರಸ್ತುತ ದಿನಗಳಲ್ಲಿ ಶಾಲೆ ಪ್ರತಿಯೊಂದು ಮಗುವಿನ ಬದುಕಿನಲ್ಲಿ ಅಪಾರವಾದ ಪಾತ್ರವನ್ನು ವಹಿಸುವುದರಿಂದ ಮನೆಗಿಂತಲೂ ಹೆಚ್ಚಿನ ಸಮಯವನ್ನು ಶಾಲೆಯಲ್ಲಿ ಕಳೆಯುವುದರಿಂದ ಬದುಕಿನ ಪ್ರತಿಯೊಂದು ಮೌಲ್ಯವನ್ನು ಶಾಲೆಯಲ್ಲಿಯೇ ಕಲಿಯುವುದರಿಂದ ಊಟ, ಪಾಠ ಆಟ ಎಲ್ಲಕ್ಕೂ ಶಾಲೆಯೇ ಆಧಾರವಾಗಿರುವುದರಿಂದ ಟಿ ಪಿ ಕೈಲಾಸಂ ಅವರು ಹೇಳಿದ ಮಕ್ಕಳೀಸ್ಕೂಲ್ ಮನೇಲಲ್ಲವೆ ಎಂಬ ಮಾತನ್ನು ಈಗ ʼಮಕ್ಕಳ ಮನೆ ಇಸ್ಕೂಲ್ ಅಲ್ವೇʼ ಎಂದು ತಿದ್ದುಪಡಿ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:ಸಾರ್ವಜನಿಕರ ಹೃದಯ ಗೆಲ್ಲುವಂಥ ಸೇವೆ ಮಾಡಿ; ಸಚಿವ ದರ್ಶನಾಪುರ
ಸಮಾರಂಭದಲ್ಲಿ ಹೋಲಿ ಪ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಅಲ್ತಾಫ್ ಅಹಮದ್, ಅಧ್ಯಕ್ಷರಾದ ಷಾಝಿಯಾ ಅಲ್ತಾಫ್ ಅಹಮದ್, ಹೋಲಿ ಪ್ರೆಸೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪೌಲ್, ಸಿ ಬಿ ಎಸ್ ಸಿ ಶಾಲೆಯ ಪ್ರಾಂಶುಪಾಲರಾದ ಶಿವಮೂರ್ತಿಯವರು, ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಲತಾ ಹಾಗು ಇತರರು ಭಾಗವಹಿಸಿದ್ದರು.
