ಶಹಾಪುರ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬಡವರು ಬರಲಿದ್ದು ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಸೇವೆ ಒದಗಿಸುವ ಮೂಲಕ ಜನರ ಹೃದಯ ಗೆಲ್ಲುವಂತೆ ಸೇವೆ ಮಾಡಿ. ಸಿ.ಟಿ ಸ್ಕ್ಯಾನ್ ನಿಂಗ್ ದರ ಹೆಚ್ಚಿದ್ದು ಬಡವರಿಗೆ ಹೆಚ್ಚಿನ ಹೊರೆಯಾಗುತ್ತಿದ್ದು, ಕಡಿಮೆ ದರ ಮಾಡಲು ಸೂಚಿಸಿದರು. ಇದನ್ನೂ ಓದಿ: ಬ್ಯಾಕ್ ಲಾಗ್ ಹಾಗೂ ಇಲಾಖಾ ಮುಂಬಡ್ತಿಯಲ್ಲಿನ ಅನ್ಯಾಯ ಸರಿಪಡಿಸಲು ಕ್ರಮ
ಗರ್ಭೀಣಿ ಮಹಿಳೆಯರ ಹಿತದೃಷ್ಠಿಯಿಂದ ಹೆರಿಗೆ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಕ್ರಮ ತೆಗೆದು ಕೊಳ್ಳಲಾಗುವುದು. ಮತ್ತು ಆಸ್ಪತ್ರೆಗೆ ಅಗತ್ಯವಿರುವ ಗ್ರೂಪ್ ಡಿ ನೌಕರರು, ಕಂಪ್ಯೂಟರ್ ಆಪರೇಟರ್ ನೇಮಕ ಮಾಡಿಕೊಳ್ಳಲು ತಿಳಿಸಿದರು. ಈಗಾಗಲೇ ಆಸ್ಪತ್ರೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಮತ್ತು ಆಸ್ಪತ್ರೆಯಲ್ಲಿ ಜನರಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡಲು ಸರ್ಕಾರದಿಂದ ಅನೇಕ ಸೌಲಭ್ಯ ನೀಡಲಾಗುತ್ತಿದೆ.
ತಾಲೂಕಿನ ಗ್ರಾಮೀಣ ಭಾಗದಿಂದ ಬರುವ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ ಉಮಾಕಾಂತ ಹಳ್ಳೆ, ಆಸ್ಪತ್ರೆ ಆಡಳಿತ ವೈದ್ಯಧಿಕಾರಿ ಡಾ.ಯಲ್ಲಪ್ಪ ಪಾಟೀಲ್, ಸಂಗಣ್ಣ ನುಚ್ಚೀನ್, ಡಾ.ಗಂಗಾಧರ ಚಟ್ರಕಿ, ಪಿಎಸ್ಐ ಸೋಮಲಿಂಗ, ಪಿಎಸ್ಐ ಶ್ಯಾಮಸುಂದರ, ಎಇಇ ಸೂಗರೆಡ್ಡಿ, ಎಇಇ ಮರೆಪ್ಪ ಸೇರಿದಂತೆ ಇತರರು ಇದ್ದರು.
