ಕೆಎಂಜೆಯು ನೂತನ ರಾಜ್ಯಾಧ್ಯಕ್ಷರಾಗಿ ಚಂದ್ರಶೇಖರ್ ಜಿ, ಆಯ್ಕೆ

ಕೆಎಂಜೆಯು ನೂತನ ರಾಜ್ಯಾಧ್ಯಕ್ಷರಾಗಿ ಚಂದ್ರಶೇಖರ್ ಜಿ, ಆಯ್ಕೆ

ಬೆಂಗಳೂರು: ಇತ್ತೀಚಿಗೆ ನಡೆದಿರುವ ಸರ್ವ ಸದಸ್ಯರ ಸಭೆಯಲ್ಲಿ ಕಾರ್ಯಕಾರಿಣಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಈ ಸಮಿತಿಯಲ್ಲಿ ನೂತನ ರಾಜ್ಯ ಅಧ್ಯಕ್ಷರಾಗಿ ಸಂಜೆ ಎಕ್ಸ್ ಪ್ರೆಸ್ ಸಂಜೆ ದಿನ ಪತ್ರಿಕೆಯ ಸಂಪಾದಕರಾದ ಚಂದ್ರಶೇಖರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸುವರ್ಣ ನ್ಯೂಸ್ ಟಿವಿ ವರದಿಗಾರರಾದ ಟಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಜಾವಾಹಿನಿ ದಿನ ಪತ್ರಿಕೆ ಸಂಪಾದಕರಾದ ನಕಿರೆ ಕಂಟಿ ಸ್ವಾಮಿ, ಖಜಾಂಚಿಯಾಗಿ ಕಸ್ತೂರಿ ನ್ಯೂಸ್ ವರದಿಗಾರರಾದ ಸುರೇಶ ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಪ್ರಜಾವಾಣಿ ವರದಿಗಾರರಾದ ಲಿಂಗರಾಜ್ ಕೆ, ಕಾರ್ಯದರ್ಶಿಯಾಗಿ ಸಂಜೆ ಸಮಾಚಾರ್ ಪತ್ರಿಕೆ ಸಂಪಾದಕರಾದ ಮಹೇಂದ್ರ ಅವರನ್ನು ಕಾರ್ಯಕಾರಿಣಿ ಸದಸ್ಯರಾಗಿ ಶಶಿಕುಮಾರ್, ವಿಜಯ ಕರ್ನಾಟಕ ವರದಿಗಾರರು, ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರಾದ ಅಶ್ವಿನಿ ಅವರನ್ನು ಆಯ್ಕೆ ಮಾಡಲಾಯಿತು.

2024-25 ನೇ ಸಾಲಿನ ಈ ಸದಸ್ಯರ ಸಮಿತಿಯನ್ನು ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಹೊಸ ಸಮಿತಿಯ ಸದಸ್ಯರಿಗೆ ವಿಶ್ವವಾಣಿ, ಸುದ್ದಿ ಸಂಪಾದಕರಾದ ಹಾಗೂ ಯೂನಿಯನ್ ಗೌರವ ಅಧ್ಯಕ್ಷರಾದ ಶಿವಕುಮಾರ್ ಬೆಳ್ಳಿತಟ್ಟೆ ಯವರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನೂತನ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿರುವ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರಿಗೆ ಹಾಗೂ ವರದಿಗಾರರಿಗೆ ಸದಸ್ಯತ್ವವನ್ನು ನೀಡಲು ಆಧ್ಯತೆ ನೀಡಲಾಗುವುದು.

ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮದ ಪತ್ರಕರ್ತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳು ಲಭ್ಯವಾಗುವಲ್ಲಿ ಯೂನಿಯನ್ ಶ್ರಮಿಸಲಿದೆ ಎಂದು ತಿಳಿಸಿದರು.

ಮುಖ್ಯವಾಗಿ ಪತ್ರಕರ್ತರಿಗೆ ಜೀವವಿಮೆ ಹಾಗಿ, ಮಾನ್ಯತಾ ಪತ್ರ ಹಾಗೂ ಇನ್ನಿತರ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಮಾಡಲಾಗುವುದು ಎಂದು ತಿಳಿಸಿದರು.

Related