ನಾಲ್ಕು ತಿಂಗಳು ಸೆಂಟ್ರಲ್ ಜಂಕ್ಷನ್ ಫ್ಲೈಓವರ್ ಬಂದ್

ನಾಲ್ಕು ತಿಂಗಳು ಸೆಂಟ್ರಲ್ ಜಂಕ್ಷನ್ ಫ್ಲೈಓವರ್ ಬಂದ್

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಈಗಾಗಲೇ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ. ಟ್ರಾಫಿಕ್ ಸಮಸ್ಯೆಯ ಬಗೆಹರಿಸುವ ಒಂದೇ ಒಂದು ಮಾರ್ಗವೆಂದರೆ ಅದು ನಮ್ಮ ಮೆಟ್ರೋ ಸಂಚಾರ.

ಹೌದು ಬೆಂಗಳೂರನಲ್ಲಿ ಈಗಾಗಲೇ ಮೆಟ್ರೋ ಸಂಚಾರವಿದ್ದು ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲೂ ಸಹ ಮೆಟ್ರೋ ಸಂಚಾರವನ್ನು ಪ್ರಾರಂಭ ಮಾಡಲು ಕಾಮಗಾರಿಯನ್ನು ಈಗಾಗಲೇ ಕೈಗೊಂಡಿದ್ದು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಪ್ಲೈಓವರ್  ಇಂದಿನಿಂದ ಸುಮಾರು ನಾಲ್ಕು ತಿಂಗಳವರೆಗೆ ಬಂದು ಮಾಡಲಾಗುವುದು ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

ಸಿಲ್ಕ್‌ ಬೋರ್ಡ್‌ ಫ್ಲೈಓವರ್‌ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವರೆಗಿನ ಮೆಟ್ರೋ ಕಾಮಗಾರಿಗಳು ಆರಂಭವಾಗಿವೆ. ಈ ಕಾಮಗಾರಿಯನ್ನು ಆದಷ್ಟು ಬೇಗನೇ ಮುಗಿಸಬೇಕಿರುವ ಒತ್ತಡ ಬಿಎಂಆರ್‌ಸಿಎಲ್‌ ಮೇಲಿದೆ. ಈ ಹಿನ್ನೆಲೆಯಲ್ಲಿ ಸಿಲ್ಕ್‌ ಬೋರ್ಡ್‌ ಫ್ಲೈಓವರ್‌ ಅನ್ನು ಕೆಲ ತಿಂಗಳ ಕಾಲ ಮುಚ್ಚಲೇಬೇಕಿರುವ ಅನಿವಾರ್ಯತೆ ಎದುರಾಗಿದ್ದು ಇಂದಿನಿಂದ ನಾಲ್ಕು ತಿಂಗಳವರೆಗೆ ಬಂದ್ ಮಾಡಿ ಕಾಮಗಾರಿ ಮುಗಿಸಲು ಬಿಎಂಆರ್​ಸಿಎಲ್ ಯೋಜಿಸಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್‌, ಸೇಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್ ಮೇಲ್ಸೇತುವೆ ಅಪ್‌ ಮತ್ತು ಡೌನ್‌ ರಾಂಪ್‌ ಕ್ಯಾರೇಜ್‌ ವೇ (ಮಡಿವಾಳ ಬದಿ) ಲೂಪ್‌ಗಳು ಮತ್ತು ರಾಂಪ್‌ ಫ್ಲೈಓವರ್‌ ಸ್ಟ್ರೇಜಿಂಗ್‌ ಕಾಮಗಾರಿ ಕೈಗೊಳ್ಳಲು ತಾತ್ಕಾಲಿಕವಾಗಿ ದಿನಾಂಕ 21-10- 2023 ರಿಂದ (ನಾಲ್ಕು ತಿಂಗಳವರೆಗೂ ಎರಡು ಕ್ಯಾರೇಜ್‌ ಮಾರ್ಗಗಳಲ್ಲಿ 2.50 ಮೀಟರ್‌) ಭಾಗಶಃ ಬ್ಯಾರಿಕೇಡ್‌ ಹಾಕಲಾಗುವುದು. ಸಾರ್ವಜನಿಕರು ಸಹಕರಿಸಿ ಇದರಿಂದಾಗುವ ಅನಾನುಕೂಲತೆಗೆ ವಿಷಾಧಿಸುತ್ತೇವೆ’ ಎಂದು ತಿಳಿಸಿದೆ.

 

Related