ಕೇಂದ್ರ ಬಿಜೆಪಿಯಿಂದ ಕಾಂಗ್ರೆಸ್ ಗೆ ಐಟಿ ದಾಳಿ ಬೆದರಿಕೆ: ಡಿ.ಕೆ.ಸುರೇಶ್

ಕೇಂದ್ರ ಬಿಜೆಪಿಯಿಂದ ಕಾಂಗ್ರೆಸ್ ಗೆ ಐಟಿ ದಾಳಿ ಬೆದರಿಕೆ: ಡಿ.ಕೆ.ಸುರೇಶ್

ಆನೇಕಲ್: ಬಿಜೆಪಿ ಸರ್ಕಾರದ ಮೋದಿ ಆಡಳಿತದಿಂದ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯ ಕರ್ತರ ಮೇಲೆ ಪದೇ ಪದೇ ಐಟಿ ಅಧಿಕಾರಿಗಳಿಂದ ದಾಳಿ ನಡೆಸಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಅಭ್ಯರ್ಥಿ ಡಿ ಕೆ ಸುರೇಶ್ ಅವರು ಮೋದಿ ಅವರ ವಿರುದ್ಧ ಆಕ್ರೋಶ ಹರಹ ಹಾಕಿದ್ದಾರೆ.

ನಗರದಲ್ಲಿಂದು ಕಾರ್ಯಕರ್ತರ ಸಭೆಯನ್ನುದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪದೇ ಪದೇ ಐಟಿ ಅಧಿಕಾರಿಗಳು ದಾಳಿ ಮಾಡುತ್ತಿರುವುದಕ್ಕೆ ಕಾರಣ ಮೋದಿ ಅವರೇ ಎಂದು ಹೇಳಿದ್ದಾರೆ.

ಬಿಜೆಪಿ ಹಾಗೂ ಮಾಜಿ ಪ್ರಧಾನಿಯವರ ಕೈಗೊಂಬೆ ಆಗಿರುವ ಐಟಿ ಅಧಿಕಾರಿಗಳು ನಮ್ಮ ಕಾರ್ಯಕರ್ತರ ಮನೆಯಲ್ಲಿ ಮಹಿಳೆಯರನ್ನು ಕೇವಲವಾಗಿ ಕಂಡು, ಯುವಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಚುನಾವಣೆ ಸೋಲಿನ ಭೀತಿಯಿಂದ ಐಟಿ, ಇ.ಡಿ. ಮೂಲಕ ನಮ್ಮ ಕಾರ್ಯಕರ್ತರನ್ನು ಬೆದರಿಸುವ ಪ್ರಯತ್ನ ಕನ್ನಡ ನಾಡಿನಲ್ಲಿ ಹೆಚ್ಚು ದಿನ ನಡೆಯುವುದಿಲ್ಲ. ನಾವು ಇಂತಹ ಬೆದರಿಕೆಗೆ ಅಂಜುವುದೂ ಇಲ್ಲ ಎಂದರು.

ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಬರೆಯುತ್ತಿದ್ದು, ಐಟಿ ಇಲಾಖೆ ಮುಖ್ಯಸ್ಥರ ಗಮನಕ್ಕೆ ತರುತ್ತೇನೆ. ಅವರ ಕೆಲಸ ಕೇವಲ ಪರಿಶೀಲನೆ ಮಾಡುವು ದಾದರೆ ಮಾಡಲಿ. ಅದನ್ನು ಬಿಟ್ಟು ಬಿಜೆಪಿ ಪರ ಪ್ರಚಾರ ಮಾಡುವುದು ಸರಿಯಲ್ಲ. ಇದು ಅಕ್ಷಮ್ಯ ಅಪರಾಧ. ಹೀಗೆ ಮುಂದುವರಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

 

Related