ಗ್ರಂಥಪಾಲಕರ ದಿನಾಚರಣೆ ಆಚರಣೆ

ಗ್ರಂಥಪಾಲಕರ ದಿನಾಚರಣೆ ಆಚರಣೆ

ಮುಂಡರಗಿ: ಪಟ್ಟಣದ ಪುರಸಭೆ ಆವರಣದಲ್ಲಿರುವ ಗ್ರಂಥಾಲಯದಲ್ಲಿ ಗ್ರಂಥಾಲಯ ಪಿತಾಮಹಾ ಎ.ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಬುಧವಾರ ಗ್ರಂಥಪಾಲಕರ ದಿನಾಚರಣೆ ಆಚರಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಎನ್.ಎಂ.ಹಾದಿಮನಿ ಮಾತನಾಡಿ, ಗ್ರಂಥಾಲಯ ಇಲಾಖೆ ಪರಿಚಯಿಸಿದ ಸೇವಾ ಸಿಂಧು ಯೋಜನೆ ಅಡಿಯಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು.

ಪುರಸಭೆ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ರಫಿಕ್ ಮುಲ್ಲಾ, ಮಾಜಿ ಸದಸ್ಯ ವೀರೇಶ ಸಜ್ಜನರ, ಜಿ.ಎಂ.ಸೇಡದ, ಕೆ.ಕೆ.ಕಡ್ಡಿ, ಗ್ರಂಥಾಲಯ ಸಹಾಯಕಿ ಕೀರ್ತಿ ದೇಸಾಯಿ, ಗವಿಸಿದ್ದಪ್ಪ ಪಗಡದಿನ್ನಿ ಉಪಸ್ಥಿತರಿದ್ದರು.

Related