ಧನ ಕರುಗಳನ್ನು ಬಿಡದ ಕಟುಕರು

ಧನ ಕರುಗಳನ್ನು ಬಿಡದ ಕಟುಕರು

ಚಿಕ್ಕೋಡಿ, ಫೆ. 07:  ಹಸು, ಎತ್ತು, ಧನ ಕರುಗಳನ್ನು ಸಹ ಬಿಡದ ಕಟುಕರು ಭಾರತೀಯ ಸಂಸ್ಕೃತಿಯ ಗೋಹತ್ಯೆ ನಿಷೇಧ ಎಂದು ಆದೇಶ ಇದ್ದರೂ ಸಹ ಇಲ್ಲೊಂದು ಪಟ್ಟಣದಲ್ಲಿ ಗೋಹತ್ಯೆ ರಾಜಾರೋಷವಾಗಿ ನಡೀತಾ ಇದೆ ಈ ಒಂದು ಪ್ರಕರಣ ನಡೆದಿದ್ದು, ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಕಸಾಯಿ ಖಾನೆಯ ಕಹಾನಿಯ ಸ್ಟಿಂಗ ಆಪರೇಷನ್ ನೋಡಿ ನಿಜವಾಗಿ ಬೆಚ್ಚಿ ಬೀಳುತ್ತಿರಿ ಸುಮಾರು ವರ್ಷ ಗಳಿಂದ ಅಕ್ರಮವಾಗಿ 10 ನಂಬರಿ ಮಾಂಸ ವ್ಯಾಪಾರ ನಡೆಯುತ್ತಿದ್ದು, ಈವರೆಗೆ ಸಂಭಂಧ ಪಟ್ಟ ಇಲಾಖೆಯ ಅಧೀಕಾರಿಗಳು ಈ ದಂದೆಗೆ ಸಾಥ ನೀಡುತ್ತಾರೆ ಎಂದು ಕಂಡುಬರುತ್ತದೆ. ಏಕೆಂದರೆ ವ್ಯಾಪಾರ ವಹಿವಾಟು ನಡೆಸುವ ಅಡ್ಡೆಯ ಸುತ್ತ ಮುತ್ತಲಿನ ಪರಿಸರದಲ್ಲಿ ಸುಪ್ರಸಿದ್ಧ ಹನುಮಾನ ಮಂದಿರ, ನಿಪ್ಪಾಣಿ ಮದ್ಯವರ್ತಿ ಸ್ಮಶಾನ ಭೂಮಿ, ಧೋಬಿ ಘಾಟ್, ಇರುವುದರಿಂದ ಪ್ರತಿನಿತ್ಯವೂ ಸಾವಿರಾರೂ ಜನರು ಓಡಾಡುವ ಸ್ಥಳವಾಗಿದೆ ಈ ವರೆಗೂ ತಾಲೂಕು ಮಂಡಳಿಯ ಗಮನಕ್ಕೆ ಬಂದರು, ಕಣ್ಣಿಗೆ ಕಾಣಿಸಿಕೊಂಡರು ಬಾಯಿ ಮುಚ್ಚಿ, ಕಣ್ಣು ಮುಚ್ಚಿ ಕುಳಿತ್ತಿದ್ದಾರೆ, ಏಕೆ ಗೊತ್ತಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯೆ: ಪ್ರಥ್ವೀರಾಜ, ಮುರ್ಕಿಭಾವಿ, ರಾಜು, ಕೊಪಾರ್ಡೆ, ಹಿಂಧೂ ಸಂಘ ಅಡ್ಡೆಯ ಸುತ್ತಮುತ್ತಲಿನ ಪ್ರದೇಶದಲ್ಲಿ, ರಸ್ತೆ, ಗಟಾರು, ಬೀದಿಗಳಲ್ಲಿ ಸಹ ಧನಕರು ಆಕಳು, ಎತ್ತುಗಳ, ಚರ್ಮ, ತಲೆ ಬುರುಡೆ, ತೆಲೆಯ ಖೋಡುಗಳು, ಅಲ್ಲದೆ ಪ್ರಾಣಿಗಳ ಹೊಟ್ಟೆಯಲ್ಲಿನ ತ್ಯಾಜ್ಯವನ್ನು, ಬೇಡವಾದ ಮಾಂಸವನ್ನು ಎಸೆಯುತ್ತಿದ್ದರಿಂದ ಗಬ್ಬು ದುರ್ವಾಸನೆ ಬೀರುತ್ತಿದೆ ಮತ್ತು ಕೊಳೆತು ಕ್ರೀಮಿ ಕೀಟಗಳು ಹುಳುಗಳು ಹರಿದಾಡುತ್ತಿವೆ.

ಅಲ್ಲದೇ ನಾಯಿಗಳ, ಕಾಗೆ, ಗೂಭೆಗಳ ಕಾಟದಿಂದ ಜನರಿಗೆ ಅಲ್ಲಿ ಓಡಾಡಲು ಹೆಚ್ಚು ತೊಂದರೆ ಆಗುತ್ತಿದೆ ಮತ್ತು ಚಿಕ್ಕಮಕ್ಕಳು, ಹಿರಿಯರು ಅನಾರೋಗ್ಯದಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಈ ಕ್ರತ್ಯವನ್ನು ಹಿಂಧೂ ರಾಷ್ಟ್ರ ಸೇನಾ, ರಾಮ ಸೇನಾ ತೀವ್ರವಾಗಿ ಖಂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಗೋ ಹತ್ಯೆ ನಿಲ್ಲದಿದ್ದರೆ, ಸುತ್ತ ಮುತ್ತಲಿನ ಪರಿಸರ ಸ್ವಚ್ಚತೆ ಗೊಳಿಸದಿದ್ದರೆ ರಾಜ್ಯ ವ್ಯಾಪಿ ಉಗ್ರ ಹೋರಾಟ ಮಾಡುವುದಾಗಿ ಘೋಷಿಸಿದರು.

ಈ ಸಮಯದಲ್ಲಿ ಭಾರತೀಯ ಕ್ರಷಿಕ ಸಮಾಜ ಮಹಿಳಾ ಉಪಾಧ್ಯಕ್ಷೆ ಶಕುಂತಲಾ ತೇಲಿ, ಬಸವರಾಜ.ಕಲ್ಯಾಣಿ ಆತಿಶ. ಚವ್ಹಾಣ, ಪ್ರಥ್ವೀರಾಜ, ಮುರ್ಕಿಭಾವಿ, ರಾಜು. ಕೊಪಾರ್ಡೆ ಉಪಸ್ಥಿತಿ ಇದ್ದರು.

Related