ಬ್ರ್ಯಾಂಡ್ ಬೆಂಗಳೂರು ಬೈಬೈ ಬೆಂಗಳೂರು ಆಗಿದೆ: ಆರ್​. ಅಶೋಕ್!

ಬ್ರ್ಯಾಂಡ್ ಬೆಂಗಳೂರು ಬೈಬೈ ಬೆಂಗಳೂರು ಆಗಿದೆ: ಆರ್​. ಅಶೋಕ್!

ಬೆಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರು ಮತ್ತು ಮುಖಂಡರ ಬುದ್ಧಿ ಬ್ರಮಣೆಯಾಗಿದೆಯೆಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನ ಎಲ್ಲ ನಾಯಕರಿಗೆ ಕೋರ್ಟ್ ತಪರಾಕಿ ಹಾಕಿದೆ. ರಾಹುಲ್ ಗಾಂಧಿ ಸೇರಿ ಹಲವರಿಗೆ ಕೋರ್ಟ್​ ಬಿಸಿ ಮುಟ್ಟಿಸಿದೆ. ಶಿವರಾಜ್ ತಂಗಡಗಿ ಕೂಡ ನಾಲಗೆ ಹರಿಬಿಟ್ಟಿದ್ದಾರೆ. ಸೋಲಿನ ಭಯದಿಂದ ಈ ರೀತಿ ಮಾತಾಡುತ್ತಿದ್ದಾರೆ. ಸಂಸ್ಕೃತಿ ಇಲ್ಲದ ಸಚಿವರು ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಬೆಂಗಳೂರಿನಲ್ಲಿ ನೀರಿನ ಕೊರತೆ ಇದ್ದು, ಜನರು ಪರದಾಡುತ್ತಿದ್ದಾರೆ. ಇಷ್ಟು ದಿನ ಕೆರೆಗಳನ್ನ ತುಂಬಿಸಿಲ್ಲ, ಮಣ್ಣು ತಿಂತಿದ್ರಾ? ನೀರು ಕೋಡಲು ಆಗದವರು ನೀರಾವರಿ ಸಚಿವರು. ಬ್ರ್ಯಾಂಡ್ ಬೆಂಗಳೂರು ಬೈಬೈ ಬೆಂಗಳೂರು ಆಗಿದೆ. ಕಲುಷಿತ ನೀರು ಕುಡಿದು ಅನಾರೋಗ್ಯಕ್ಕಿಡಾಗಿದ್ದಾರೆ. ರಾಜ್ಯ ಸರ್ಕಾರ ಏನು ಮಾಡುತ್ತಿದ್ದೆ ಎಂದು ಪ್ರಶ್ನಿಸಿದರು.

 

 

Related