ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಅಚ್ಚರಿ ಮೂಡಿಸುವಂತಹ ಘಟನೆ ಒಂದು ನಡೆದಿದ್ದು, ಆಡುಗೋಡಿ ಚೆನ್ನೇನಹಳ್ಳಿಯಲ್ಲಿ ಅನುಮಾನಾಸ್ಪದ ಸ್ಫೋಟದಲ್ಲಿ ಮುಬಾರಕ್ ಎನ್ನುವ ಎಂಟು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಅಲ್ಲದೆ ಈ ಸ್ಫೋಟಕದಲ್ಲಿ ಇನ್ನು ಹಲವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.
ಬೆಳಿಗ್ಗೆ ಎಂಟು ಗಂಟೆಗೆ ಸ್ಪೋಟಕಗೊಂಡಿದ್ದು, ಸುತ್ತಮುತ್ತಲಿನ ಜನರು ಅಚ್ಚರಿಕೊಂಡಿದ್ದಾರೆ. ಸ್ಫೋಟಕದಲ್ಲಿ ಎಂಟಕ್ಕೂ ಹೆಚ್ಚು ಮನೆಗಳು ಹಾನಿಯಾಗಿದೆ ಎಂದು ತಿಳಿದುಬಂದಿದೆ. ಈ ಸ್ಪೋಟಕದಲ್ಲಿ ಬೆಂಕಿನೂ ಇಲ್ಲ, ಗಾಳಿನೂ ಇಲ್ಲದೆ, ಸ್ಪೋಟಕಗೊಂಡಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕಸ್ತೂರಮ್ಮ ಎಂಬುವರ ಮನೆಯಲ್ಲಿ ಸ್ಫೋಟ ಸಂಭವಿಸಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನರಸಮ್ಮ ಸೇರಿದಂತೆ ಅನೇಕರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಪೊಲೀಸ್ರು ಹೇಳುವುದು ಸಿಲಿಂಡರ್ ಬ್ಲಾಸ್ಟ್ ಆಗಿದೆ ಎಂದು ಹೇಳುತ್ತಾರೆ. ಆದರೆ ಪ್ರತ್ಯಕ್ಷ ಸಾಕ್ಷಿಗಳು ಹೇಳುವುದರ ಪ್ರಕಾರ ಇಲ್ಲಿ ದೊಡ್ಡದಾಗಿ ಸೌಂಡ್ ಬಂತು, ಬಂದ ತಕ್ಷಣ ನಾವೆಲ್ಲರೂ ಹೊರಗಡೆ ಬಂದು ನೋಡಿದರೆ ಅಲ್ಲಿ ಗೋಡೆಗಳೆಲ್ಲ ಬಿದ್ದಿದ್ದವು ಎಂದು ಸ್ಥಳೀಯ ಪ್ರತ್ಯಕ್ಷ ಸಾಕ್ಷಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಧ್ವಜಾರೋಹಣ ನೆರವೇರಿಸಿದ ಶಾಸಕ ಸತೀಶ್ ರೆಡ್ಡಿ
ಸ್ಫೋಟಗೊಂಡ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದರು. “ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಹಾನಿಗೊಳಗಾದ ಮನೆಗಳ ರಿಪೇರಿ ಕಾರ್ಯಕ್ಕೆ ತಕ್ಷಣ ಸೂಚನೆ ನೀಡಲಾಗಿದೆ ಎಂದು ಹೇಳಿದರು.
