ಬಾಕ್ಸ್ ಬಳೆಗಾಗಿ ಜಗಳ

ಬಾಕ್ಸ್ ಬಳೆಗಾಗಿ ಜಗಳ

ಮುಂಬೈ, ಫೆ. 18 : ಬಳೆಗಾಗಿ ನಡೆದ ಜಗಳ ತಾಯಿಯ ಸಾವಿನಲ್ಲಿ ದುರಂತ ಅಂತ್ಯ ಕಂಡ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಈ ಘಟನೆ ಭಾನುವಾರ ಸಂಜೆ ಓಶಿವಾರದ ಲೋಕಂದ್ವಾಲಾ ಮಾರುಕಟ್ಟೆ ಬಳಿ ನಡೆದಿದೆ. ಮೃತಳನ್ನು ಶಶಿ ಕೋಮಲ್ ಸಾಗರ್ ಎಂದು ಗುರುತಿಸಲಾಗಿದೆ. ಶಶಿ ಕೋಮಲ್ ಸಾಗರ್ ಹಾಗೂ ಆಕೆಯ ಮಗಳು ಪ್ರಿಯಾ ಒಂದು ಬಾಕ್ಸ್ ಬಳೆಗಳಿಗಾಗಿ ಪರಸ್ಪರ ಜಗಳವಾಡಿಕೊಂಡಿದ್ದಾರೆ. ಜಗಳ ತಾರಕಕ್ಕೇರಿ ಸಿಟ್ಟಿನಿಂದ ಮನೆಯ ಸದಸ್ಯರೆದುರೇ ಮಗಳು ಫಿನಾಯಿಲ್ ಕುಡಿದಿದ್ದಾಳೆ.
ಕೂಡಲೇ ಮನೆಯವರೆಲ್ಲರೂ ಸೇರಿ ಪ್ರಿಯಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಮನೆಗೆ ಬಂದಿದ್ದಾರೆ. ಆದರೆ ಮನೆಗೆ ಬಂದಾಗ ಶಶಿ ಮನೆಯಲ್ಲಿ ಇರಲಿಲ್ಲ. ಇದರಿಂದ ಗಾಬರಿಗೊಂಡ ಮನೆ ಸದಸ್ಯರು ಶಶಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ಎರಡನೇ ಮಹಡಿಯಲ್ಲಿ ಶಶಿ ದೇಹ ಪತ್ತೆಯಾಗಿದೆ.

Related