ಜ್ಞಾನ ವಿಕಸನಕ್ಕೆ ಪುಸ್ತಕ ಬೇಕು: ಸಿಎಂ

ಜ್ಞಾನ ವಿಕಸನಕ್ಕೆ ಪುಸ್ತಕ ಬೇಕು: ಸಿಎಂ

ಬೆಂಗಳೂರು: ಇಂದಿನಿಂದ ಬೆಂಗಳೂರು ನಗರದಲ್ಲಿರುವ ಎಚ್ಎಸ್ಆರ್ ಬಡಾವಣೆಯಲ್ಲಿ ಎರಡು ದಿನಗಳ ಕಾಲ ಪುಸ್ತಕ ಸಂತೆ ಆರಂಭವಾಗಿದ್ದು, ಈ ಪುಸ್ತಕ ಸಂತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿದ್ದಾರೆ.

ಇನ್ನು ಉದ್ಘಾಟನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೆಚ್ಚಿನ ಜ್ಞಾನ ಪಡೆಯಬೇಕೆಂದರೆ ನಾವು ಪುಸ್ತಕಗಳನ್ನು ಓದಲೇಬೇಕು. ಕವಿತೆ ಕಾದಂಬರಿಗಳನ್ನು ಓದಿದಾಗ ಮಾತ್ರ ನಮಗೆ ಹೆಚ್ಚಿನ ಜ್ಞಾನ ಲಭ್ಯವಾಗುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಇನ್ನು ಈ ಪುಸ್ತಕ ಸಂತೆಯಲ್ಲಿ ಒಟ್ಟು 100ಕ್ಕೂ ಹೆಚ್ಚು ಪುಸ್ತಕಗಳ ಸ್ಟಾಲ್ ಹಾಕಲಾಗಿದೆ. 100ಕ್ಕೂ ಹೆಚ್ಚು ಸಾಹಿತಿಗಳು ಪುಸ್ತಕ ಸಂತೆಯಲ್ಲಿ ಭಾಗಿಯಾಗಿದ್ದಾರೆ. ಈ ಪುಸ್ತಕ ಸ್ಟಾಲ್​ನಲ್ಲಿ 55 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಒಂದೇ ವೇದಿಕೆಯಲ್ಲಿ ಸಿಗಲಿವೆ. ರಿಯಾಯಿತಿ ದರದಲ್ಲಿ ಪುಸ್ತಕಗಳ ಬೆಲೆ ನಿಗದಿ ಮಾಡಲಾಗಿದೆ. ಪುಸ್ತಕ ಸಂತೆಯಲ್ಲಿ ಪುಡ್ ಸ್ಟಾಲ್‌ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.‌

ದೇಶ ಸುತ್ತು ಕೋಶ ಓದು ಅಂತ ನಾಣ್ಣುಡಿ ಇದೆ. ಜ್ಞಾನದ ಬೆಳವಣಿಗೆ ಆಗಬೇಕಾದ್ರೆ ಪುಸ್ತಕ ಓದಲೇಬೇಕು. ಅನೇಕ ವಿಷಯಗಳ ಮೇಲೆ ಲೇಖಕರು ಪುಸ್ತಕಗಳನ್ನ ಬರೆದಿದ್ದಾರೆ. ಜ್ಞಾನ ವಿಕಸನಕ್ಕೆ ಪುಸ್ತಕ ಬೇಕು. ದುಡ್ಡು ಕೊಟ್ಟು ಪುಸ್ತಕ ಖರೀದಿಸಿ ಓದಬೇಕು. ಇನ್ನೊಬ್ಬರು ತೆಗೆದುಕೊಂಡ ಪುಸ್ತಕದಿಂದ ಓದಬಾರದು. ಪತ್ರಿಕೆ ತರ ಓದಬಾರದು. ರಾಮೇಗೌಡ ಅಂತ ಒಬ್ಬ ಇದ್ದ. ನಾನು ಓದು ಮುಗಿಸೋದನ್ನ ಕಾದು ನಂತರ ಅವನೇ ಆ ಪೇಪರ್ ತೆಗೆದುಕೊಂಡು ಹೋಗ್ತಿದ್ದ. ಈಗ ಅವನು ಕಾಲವಾಗಿದ್ದಾನೆ ಎಂದು ಸಿಎಂ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

 

Related