ಹೆಚ್ಎಸ್ಆರ್ ನಲ್ಲಿ ಪುಸ್ತಕ ಸಂತೆ

ಹೆಚ್ಎಸ್ಆರ್ ನಲ್ಲಿ ಪುಸ್ತಕ ಸಂತೆ

ಬೊಮ್ಮನಹಳ್ಳಿ: ‘ಜನರಲ್ಲಿ ಓದುವ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಹೆಚ್ಎಸ್ಆರ್ ಬಡಾವಣೆಯಲ್ಲಿ ಫೆಬ್ರವರಿ 10 ಮತ್ತು 11 ರಂದು ಪುಸ್ತಕ ಸಂತೆ ಆಯೋಜಿಸಲಾಗಿದೆ’ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದರು.
ಸೋಮವಾರ ಹೆಚ್ಎಸ್ಆರ್ ಬಡಾವಣೆಯ ಸ್ವಾಭಿಮಾನಿ ಉದ್ಯಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ನೂರಕ್ಕೂ ಹೆಚ್ಚು ಮಳಿಗೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರಲಿದ್ದು, ಪುಸ್ತಕ ಸಂತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಾರೋಪದಲ್ಲಿ ಭಾಗವಹಿಸದ್ದಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭಾಗವಹಿಸುವರು’ ಎಂದರು.
ಪುಸ್ತಕ ಸಂತೆಯಲ್ಲಿ ಆಹಾರ ಮೇಳವೂ ನಡೆಯಲಿದ್ದು, ಎರಡೂ ದಿನ ಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಾಡಿನ ಸಾಹಿತಿಗಳು ಹಾಗೂ 20 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸ ನಿರೀಕ್ಷೆ ಇದೆ’ ಎಂದು ಪುಸ್ತಕ ಸಂತೆ ಸಂಘಟಕ ವೀರಕಪುತ್ರ ಶ್ರೀನಿವಾಸ್ ಹೇಳಿದರು.
ಇದೇ ಸಂದರ್ಭದಲ್ಲಿ ಪುಸ್ತಕ ಸಂತೆ ಪೋಸ್ಟರ್ ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿ ಮುಖಂಡ ಅನಿಲ್ ರೆಡ್ಡಿ, ಸ್ಥಳೀಯರಾದ ಬಿ.ಎನ್.ಪರೆಡ್ಡಿ ಇದ್ದರು.
ಸ್ಥಳೀಯರಾದ ಬಿ.ಎನ್.ಪರೆಡ್ಡಿ, ವಿದ್ಯಾರ್ಥಿ ಮುಖಂಡ ಅನಿಲ್ ರೆಡ್ಡಿ, ಪುಸ್ತಕ ಸಂತೆ ಸಂಘಟಕ ವೀರಕಪುತ್ರ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಅವರು ಪುಸ್ತಕ ಸಂತೆಯ ಪೋಸ್ಟರ್ ಪ್ರದರ್ಶಿಸಿದರು.

Related