ಬೊಮ್ಮನಹಳ್ಳಿಯಲ್ಲಿ ಗಿಡ ನೆಡುವ ಮೂಲಕ ಸ್ವತಂತ್ರ ದಿನಾಚರಣೆ

ಬೊಮ್ಮನಹಳ್ಳಿಯಲ್ಲಿ ಗಿಡ ನೆಡುವ ಮೂಲಕ ಸ್ವತಂತ್ರ ದಿನಾಚರಣೆ

ಬೊಮ್ಮನಹಳ್ಳಿ: ದೇಶದಾದ್ಯಂತ ಇಂದು 77 ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಸತೀಶ್ ರೆಡ್ಡಿ ಅವರು ಗಿಡ ನೆಡುವ ಮೂಲಕ ಸ್ವತಂತ್ರ ದಿನಾಚರಣೆಯ ಮಾಡಿದರು.

ಇನ್ನು 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಧ್ವಜಾರೋಹಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಂ ಸತೀಶ್ ರೆಡ್ಡಿ ಅವರು, ಬೊಮ್ಮನಹಳ್ಳಿ ಕ್ಷೇತ್ರದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಎಚ್ಎಸ್ಆರ್ ಬಡಾವಣೆಯ ಸರ್ಕಾರಿ ಶಾಲೆಯ ಮಕ್ಕಳು ಹಾಗೂ ಎಲ್ಲಾ ಖಾಸಗಿಯ ಶಾಲೆ ಮಕ್ಕಳು ಸ್ವಾತಂತ್ರ್ಯೋತ್ಸವದ ಅಂಗವಾಗಿ ಪರೇಡ್ ನಲ್ಲಿ ಭಾಗವಹಿಸಿದ್ದರು‌.

ಈ ಕ್ರೀಡಾಂಗಣದಲ್ಲಿ ಸಾವಿರಾರು ಮಕ್ಕಳು ಆಟವನ್ನು ಆಡುತ್ತಿದ್ದಾರೆ, ಆಡುವ ಮಕ್ಕಳಿಗೆ ಶುಭ ಹಾರೈಸಿದರು. ಹಾಗೆಯೇ ಪ್ರಧಾನಿ ಮೋದಿ ದೇಶದ ಪ್ರತಿಯೊಂದು ಮನೆಯಲ್ಲೂ ಕೂಡ ಜಾತಿ ಭೇದ ಭಾವ ಎನ್ನದೆ ಪ್ರತಿಯೊಂದು ಮನೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ಭಾವೈಕ್ಯ ಮೆರೆದರು. ಹಾಗೆ ಬೇರೆ ಬೇರೆ ದೇಶದಲ್ಲಿ ನೆಲೆಸಿರುವ ಭಾರತೀಯರು ಕೂಡ ತುಂಬಾ ಸಂಭ್ರಮಾಚರಣೆಯಿಂದ ಸ್ವತಂತ್ರ ದಿನಾಚರಣೆಯನ್ನು ಆಚರಿಸಿದ್ದಾರೆ ಅವರಿಗೆಲ್ಲರಿಗೂ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು ಎಂದು ಹೇಳಿದರು.

ಕ್ಷೇತ್ರದಲ್ಲೇಡೆ ಮನೆಮನೆ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು. ಹಾಗೆಯೇ ಮೊದಲ ಆದ್ಯತೆ ಯಾರು, ಶ್ರೇಷ್ಠ ಯಾವುದು ಶ್ರೇಷ್ಠ ಎಂದು ಪ್ರಶ್ನೆ ಮೂಡಿ ಬಂದಾಗ ಮೊದಲು ನನಗೆ ನನ್ನ ದೇಶ ಮೊದಲ ಆದ್ಯತೆಯಾಗಿರುತ್ತದೆ ಆಮೇಲೆ ನನ್ನ ಕುಟುಂಬ ನನ್ನ ತಂದೆ ತಾಯಿ ಬಂಧು ಬಳಗ ಎಂದು ಈ ಸಂದರ್ಭದಲ್ಲಿ ದೇಶವೇ ನನಗೆ ಮುಖ್ಯ ಎಂದು ಹೇಳಿದರು.

ನಮ್ಮ ದೇಶ ಇಲ್ಲ ಅಂದರೆ ಯಾರು ಇಲ್ಲ ನಾವೆಲ್ಲರೂ ಶೂನ್ಯ

ದೇಶಕ್ಕೋಸ್ಕರ ನಾವೆಲ್ಲರೂ ದುಡಿಯೋಣ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ದೇಶದ ಅಭಿವೃದ್ಧಿ ಮತ್ತು ದೇಶ ಕಟ್ಟುವ ಕೆಲಸವನ್ನು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು.

ಕ್ಷೇತ್ರದಲ್ಲಿ ಕ್ರೀಡಾಂಗಣ ನಿರ್ಮಿಸಿದ್ದರಿಂದ ಈ ಭಾಗದ ಎಲ್ಲಾ ಪ್ರತಿಯೊಂದು ಮಕ್ಕಳಿಗೂ ತುಂಬಾ ಉಪಯುಕ್ತವಾಗುತ್ತಿದೆ. ಕಬಡ್ಡಿ ಕೋ ಕೋ ಕ್ರೀಡೆಯಲ್ಲದೇ ಫುಟ್ಬಾಲ್, ಕ್ರಿಕೆಟ್ ಕ್ರೀಡೆಗಳಿಗೆ ಈ ಭಾಗದ ಮಕ್ಕಳಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು.

ಕ್ರೀಡಾಂಗಣದ ಹಿಂಭಾಗದಲ್ಲಿ ಮುಂದಿನ ದಿನಗಳಲ್ಲಿ ಯುವಕರಿಗೆ ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ಜಿಮ್ ಹಾಗೂ ಇನ್ನಿತರ ಒಳಾಂಗಣ ಕ್ರೀಡೆಗಳನ್ನು ಆಡುವಂತಹ ಕಟ್ಟಡಗಳನ್ನು ನಿರ್ಮಾಣ ಮಾಡುವ ಕೆಲಸ ಕೂಡ ಆಗುತ್ತಿದೆ ಎಂದು ಹೇಳಿದರು. ಕೊನೆಯದಾಗಿ ಇದೇ ಸಂದರ್ಭದಲ್ಲಿ ಎಲ್ಲರಿಗೂ ಈ 77ನೇ ಸ್ವಾತಂತ್ರ್ಯ ನೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಬದಲ್ಲಿ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಜಂಟಿ ಆಯುಕ್ತರಾದ ಅಜಿತ್ ರವರು, ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.

Related