ಮನೆಗೆಲಸಕ್ಕೆಂದು ಹೋದ ಬಾಂಬೆ ಮಹಿಳೆಯರು ಕಳ್ಳತನ ಮಾಡಿ ಅಂದರ್.!

  • In Crime
  • July 12, 2022
  • 209 Views
ಮನೆಗೆಲಸಕ್ಕೆಂದು ಹೋದ ಬಾಂಬೆ ಮಹಿಳೆಯರು ಕಳ್ಳತನ ಮಾಡಿ ಅಂದರ್.!

ಬೆಂಗಳೂರು, ಜು 12 : ಫೇಸ್ಬುಕ್ ಗ್ರೂಪ್ನಲ್ಲಿ ಪೋಸ್ಟ್ ಹಾಕಿ ಮನೆಗೆಲಸಕ್ಕೆ ಸೇರಿಕೊಂಡು ಕಳ್ಳತನ ಮಾಡುತ್ತಿದ್ದ ಬಾಂಬೆ ಲೇಡಿಸ್ ಗ್ಯಾಂಗ್ ಅನ್ನು ಬೆಂಗಳೂರು ಪೊಲೀಸರು (ಹೆಣ್ಣೂರು ಪೊಲೀಸ್ ಠಾಣಾ) ಮುಂಬೈನಲ್ಲಿ ಬಂಧಿಸಿರುವ ಘಟನೆ ನಡೆದಿದೆ.

ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳನ್ನು ಪ್ರೀಯಾಂಕ, ಮಹಾದೇವಿ, ವನಿತಾ ಎಂದು ಗುರುತಿಸಲಾಗಿದೆ. ಬಂಧಿತರಿಂದ 250 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಚಾಲಕಿ ಮಹಿಳೆಯರು ಬಾಂಬೆಯಲ್ಲೂ ತಮ್ಮ ಕೈಚಳಕ ತೋರಿಸಿ ಬಂಧಿತರಾಗಿದ್ದರು. ಎಲ್ಲಾದರೂ ಮನೆಕೆಲಸದವರಿಂದ ಕಳ್ಳತನ ಆಯ್ತು ಅಂದ್ರೆ, ಮುಂಬೈ ಪೊಲೀಸರು ಮೊದಲು ಈ ಗ್ಯಾಂಗ್ ಸದಸ್ಯರನ್ನು ಹುಡುಕುತ್ತಿದ್ದರು.

ಮುಂಬೈಯಲ್ಲಿ ಸೆಕ್ಯೂರಿಟಿ ಗಾರ್ಡ್ಗಳಿಗೆ ಕಮೀಷನ್ ಕೊಟ್ಟು ಮನೆಕೆಲಸಕ್ಕೆ ಸೇರುತ್ತಿದ್ದ ಈ ಚಾಲಾಕಿಯರು 36 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ಬಾಂಬೆಯಿಂದ ಬೆಂಗಳೂರಿಗೆ ಬಂದು ಇಲ್ಲಿಯೂ ತಮ್ಮ ಕೈಚಳಕ ತೋರಿಸಲು ಪ್ರಾರಂಭಿಸಿದ್ದರು. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿ ಎಸ್ಕೇಪ್ ಆಗಿದ್ದರು.

Related