ವಿದ್ಯಾ ಬಾಲನ್ ಫೋಟೋಸ್ ನೋಡಿ!

  • In Cinema
  • July 10, 2020
  • 688 Views
ವಿದ್ಯಾ ಬಾಲನ್ ಫೋಟೋಸ್ ನೋಡಿ!

ಈಗಾಗಲೇ ಧಾರಾವಾಹಿಗಳ ಚಿತ್ರೀಕರಣ ಆರಂಭವಾಗಿದ್ದು, ಕಲಾವಿದರು ಸೆಟ್‍ಗಳಿಗೆ ಮರಳಿದ್ದಾರೆ. ಜೊತೆಗೆ ಸಿನಿಮಾಗಳ ಶೂಟಿಂಗ್‍ಗೂ ಕಿಕ್‍ಸ್ಟಾರ್ಟ್ ಸಿಕ್ಕಿದ್ದು, ಸ್ಟಾರ್ ನಟ-ನಟಿಯರು ಚಿತ್ರೀಕರಣಕ್ಕೆ ಮರಳುತ್ತಿದ್ದಾರೆ. ಕಳೆದ 4 ತಿಂಗಳಿನಿಂದ ಮನೆಯಲ್ಲೇ ಇದ್ದ ವಿದ್ಯಾ ಬಾಲನ್ ಈಗ ಶೂಟಿಂಗ್‍ಗೆ ಹಿಂತಿರುಗಿದ್ದಾರೆ.

ಲಾಕ್‍ಡೌನ್‍ನಿಂದಾಗಿ ಸಿನಿಮಾ ಹಾಗೂ ಧಾರಾವಾಹಿಗಳ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಮಹಾರಾಷ್ಟ್ರ ಸರ್ಕಾರ ಲಾಕ್‍ಡೌನ್ ಅನ್ನು ಹಂತ ಹಂತವಾಗಿ ಸಡಿಲಗೊಳಿಸುತ್ತಿದ್ದು, ಮೆಲ್ಲನೆ ಕಿರುತೆರೆ ಹಾಗೂ ಸಿನಿಮಾಗಳ ಶೂಟಿಂಗ್ ಆರಂಭವಾಗುತ್ತಿದೆ.

ನಿನ್ನೆ ತಮ್ಮ ಇನ್‍ಸ್ಟಾಗ್ರಾಂ ಸ್ಟೋರೀಸ್‍ನಲ್ಲಿ ವಿದ್ಯಾ, ಶೂಟಿಂಗ್‍ನಲ್ಲಿ ಭಾಗಿಯಾಗಿರುವ ಕುರಿತು ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ತಂಡ ಪಿಪಿಇ ಕಿಟ್ ಹಾಗೂ ಮಾಸ್ಕ್ ಧರಿಸಿದ್ದರು.

ತಮ್ಮ ಮೊದಲ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿರುವ ವಿದ್ಯಾ, ಮಂಗಳ ಗ್ರಹದಲ್ಲಿರುವಂತೆ ಫೀಲ್ ಆಗ್ತಿದೆ ಎಂದು ಬರೆದುಕೊಂಡಿದ್ದಾರೆ.

Related