ಇಂದು ಸಿಎಂ ಮಂಡಿಸಿದ್ದು ಬೋಗಸ್ ಬಜೆಟ್ ಯತ್ನಾಳ್

ಇಂದು ಸಿಎಂ ಮಂಡಿಸಿದ್ದು ಬೋಗಸ್ ಬಜೆಟ್ ಯತ್ನಾಳ್

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಿರುವುದು ರಾಜ್ಯದಲ್ಲಿ ಯಾವೊಂದು ಭಾಗಕ್ಕೂ ಪ್ರಯೋಜನ ಆಗದಂತಹ ಯೋಜನೆಗಳನ್ನು ಇಂದು ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ ಎಂದು ಬಿಜೆಪಿಯ ಶಾಸಕ ಬಸವರಾಜ್ ಯತ್ನಾಳ್ ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ಅವರ ಹಾಕಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೂಟ್ಕೇಸ್ ನಲ್ಲಿ ಪುಸ್ತಕವನ್ನು ಇಟ್ಟುಕೊಂಡು ಬಂದು ಪುಸ್ತಕದಲ್ಲಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಓದುತ್ತಾರೆ ಹೊರತಾಗಿ. ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಾರೆ. ಅದನ್ನು ಬಿಟ್ಟು ಯಾವೊಂದು ಭಾಗಕ್ಕೆ ಇಂದು ಬಜೆಟ್ ಮಂಡಿಸಿರುವುದು ಪ್ರಯೋಜನವಾಗುವುದಿಲ್ಲವೆಂದು ಹೇಳಿದರು.

ಪುಸ್ತಕದದಲ್ಲಿ ಬರೆದಿದ್ದನ್ನು ಓದುವ ಕೆಲಸ ಮುಖ್ಯಮಂತ್ರಿ ಮಾಡಿದ್ದಾರೆ, ತಮ್ಮ ಭಾಷಣದಲ್ಲಿ ಅವರು ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವುದು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ಯತ್ನಾಳ್ ಹೇಳಿದರು.

ಮುಖ್ಯಮಂತ್ರಿಯವರೇ ಹೇಳಿದಂತೆ ಇದು 29,000 ಕೋಟಿ ರೂ. ಕೊರತೆಯ ಬಜೆಟ್, ಕೇವಲ 6 ತಿಂಗಳಿಗೆ ಹೀಗಾದರೆ ಮುಂದಿನ ವರ್ಷ ಇದು ಒಂದು ಲಕ್ಷ ಕೋಟಿ ರೂ. ಕೊರತೆ ಬಜೆಟ್ ಅಗಲಿದೆ ಎಂದು ಯತ್ನಾಳ್ ಹೇಳಿದರು.

Related