ಬಿ.ಕೆ.ವಿ.ಸರ್ಕಾರಿ ಪ್ರೌಢ ಶಾಲೆ ಅಟಲ್ ಟಿಂಕರಿಗ್ ಲ್ಯಾಬ್ ಉಧ್ಘಾಟನೆ

ಬಿ.ಕೆ.ವಿ.ಸರ್ಕಾರಿ ಪ್ರೌಢ ಶಾಲೆ ಅಟಲ್ ಟಿಂಕರಿಗ್ ಲ್ಯಾಬ್ ಉಧ್ಘಾಟನೆ

ಕೊಟ್ಟೂರು: ತಾಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಸೋಮವಾರ ಸಂಸದ ವೈ.ದೇವೇಂದ್ರಪ್ಪ ರವರು ಶ್ರೀ ಬಿ.ಕೆ.ವಿ.ಸರ್ಕಾರಿ ಪ್ರೌಢ ಶಾಲೆ ಅಟಲ್ ಟಿಂಕರಿಗ್ ಲ್ಯಾಬ್ ಉಧ್ಘಾಟನೆ ಮಾಡಿದರು.

ನಂತರ ಮಾತನಾಡಿದ ಅವರು ವಿಜ್ಞಾನ ನಿಂತ ನೀರಲ್ಲ ಹರಿಯುತ್ತಿರುವ ನೀರಿನಂತೆ ಆಗಾಗ, ಬದಲಾವಣೆ ಜಗತ್ತಿಗೆ ಹೊಸ ಹೊಸ ಮಾದರಿಯ ವಿನೂತನ ಆವಿಷ್ಕಾರಗಳು ನಡೆಯುತ್ತಿರುತ್ತವೆ ಅಂತಹ ವಿನೂತನವಾದ ಮತ್ತು ಹಳ್ಳಿ ಜನರಿಗೆ ಉಪಯುಕ್ತ ಆಗುವಂತಹ ಆವಿಷ್ಕಾರಗಳು ನಿಂಬಳಗೆರೆ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಂದ ಆಗಬೇಕೆಂದರು.

ಅಟಲ್ ಟಿಂಕರಿಂಗ್ ಲ್ಯಾಬ್ನ ಸೌಲಭ್ಯ ಎಲ್ಲಾ ಶಾಲೆಗೆ ಲಭ್ಯವಿರುವುದಿಲ್ಲ ಶ್ರಮ ಮತ್ತು ಸಾಧನೆಳ ಮೂಲಕ ದೊರೆಯುವಂತಹದ್ದು ಅಂತಹ ಪರಿಶ್ರಮದಿಂದ ಈ ಒಂದು ಗ್ರಾಮಕ್ಕೆ ಇಲ್ಲಿನ ಶಿಕ್ಷಕರು ಈ ಲ್ಯಾಬ್ ಸೌಲಭ್ಯವನ್ನು ಕಲ್ಪಿಸಿಕೊಂಟ್ಟಿರುವರು ಇದರ ಪ್ರಯೋಜನೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಪಡೆದುಕೊಂಡು ಹಳ್ಳಿಯಿಂದ ದಿಲ್ಲಿವರೆಗೆ ಎಂಬ ನಾಡನುಡಿಯಂತೆ ಇಡೀ ವಿಶ್ವವೇ ನಿಮ್ಮ ಗ್ರಾಮದತ್ತ ತಿರುಗಿ ನೋಡುವಂತೆ, ಸಾಧನೆ ಮಾಡಿ ಎಂದರು.
ನಿಂಬಳಗೆರೆ ಶ್ರೀ ಕೆ.ಬಿ.ವಿ ಸರ್ಕಾರಿ ಪ್ರೌಢ ಶಾಲೆಯ ಹೆಸರು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವಂತೆ ಶ್ರಮಿಸಿದ ವಿಜ್ಞಾನ ಶಿಕ್ಷಕ ಬಿ.ಪತ್ರೇಶ್ ಮತ್ತು ಗಣಿತ ಶಿಕ್ಷಕ ಎಸ್.ಐ.ಕಣದಮನಿ ಹಾಗೂ ಮುಖ್ಯೋಪಾಧ್ಯಾಯ ಪಕ್ಕೀರಪ್ಪರ ಕಾರ್ಯ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ನಿಂಬಳಗೆರೆ ಸರ್ಕಾರಿ ಪ್ರೌಢ ಶಾಲೆ ಹೆಸರು ಸುವರ್ಣ ಅಕ್ಷರದಲ್ಲಿ ಬರೆದಿಡುವಂತ ದಿನ ಅಟಲ್ ಟಿಂಕರಿಂಗ್ ಲ್ಯಾಬ್ ಗೆ ಸುಮಾರು ದೇಶದಾದ್ಯಂತ 12 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು ಅದರಲ್ಲಿ ಕೇವಲ 27ನ್ನು ಮಾತ್ರ ಭಾರತ ಸರ್ಕಾರ ಆಯ್ಕೆ ಮಾಡಿತು ಅದರಲ್ಲಿ ನಿಂಬಳಗೆರೆ ಗ್ರಾಮದ ಶಾಲೆಯು ಒಂದು ಈ ಲ್ಯಾಬ್ ಯಾವುದೇ ಸರ್ಕಾರದ ಅನುದಾನದಿಂದ ಬಂದಿದಲ್ಲ ಇಲ್ಲಿನ ವಿಜ್ಞಾನ ಮತ್ತು ಗಣಿತ ಶಿಕ್ಷಕರ 10 ವರ್ಷದ ಸತತ ಪರಿಶ್ರಮದ ಸಮರ್ಪಣಾ ಮನೋಭಾವದಿಂದ ದೊರೆತಿರುವಂತಹದ್ದು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಚಾಲಕರು ಎಮ್.ಗುರುಸಿದ್ದಸ್ವಾಮಿ ಪ್ರಾಸ್ತಾವಿಕ ನುಡಿಯಲ್ಲಿ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ, ಕ್ಷೇತ್ರ ಸಮನ್ವಯಾಧಿಕಾರಿ ಜಮೀರ ಅಹಮದ್, ಶಾಲೆಗೆ ಭೂಮಿ ದಾನನೀಡಿದ ಬಿ.ಎಸ್.ಕೊಟ್ರೇಶ್, ಕೂಡ್ಲಿಗಿ ಜ್ಞಾನ ಭಾರತಿ ವಿದ್ಯಾಸಂಸ್ಥೆ ಮುಖ್ಯಸ್ಥರು ಕೆ.ತಿಪ್ಪೇಸ್ವಾಮಿ, ಕೊಟ್ಟೂರು ತಾಲೂಕು ಶಿಕ್ಷಕ ನೌಕರ ಸಂಘದ ಕಾರ್ಯದರ್ಶಿ ಸಿದ್ದಪ್ಪ, ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಜಿ.ಎಂ.ಪ್ರಕಾಶ್ ಗೌಡ,ಕೊಟ್ಟೂರು ಸರ್ಕಾರಿ ಬಾಲಕಿಯರ ಶಾಲೆ ಮುಖ್ಯೋಪಾಧ್ಯಾಯ ಬಸವರಾಜ್ ವಿದ್ಯಾರ್ಥಿ ದರ್ಶನ ಮಾತನಾಡಿದ್ದರು.

ಕಾರ್ಯಕ್ರಮದಲ್ಲಿ ಬಿಆರ್ಸಿಗಳು ಅಟಲ್ ಟಿಂಕರಿಂಗ್ ಲ್ಯಾಬ್ ತರಬೇತಿ ಶಿಕ್ಷಕರು, ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರು ಮತ್ತು ಎಸ್.ಡಿ.ಎಂ.ಸಿ. ಸದಸ್ಯರು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಇದ್ದರು.

Related