ಯತ್ನಾಳ್ ಅವರ ಕೈಯಲ್ಲಿ ಬಿಜೆಪಿಯವರ ಸತ್ಯ ಅಡಗಿದೆ: ಸಚಿವ ಎಂ.ಬಿ.ಪಾಟೀಲ್

ಯತ್ನಾಳ್ ಅವರ ಕೈಯಲ್ಲಿ ಬಿಜೆಪಿಯವರ ಸತ್ಯ ಅಡಗಿದೆ: ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ಬಿಜೆಪಿಯ ಶಾಸಕ ಬಸವರಾಜ್ ಯತ್ನಾಳ್ ಅವರು ಸ್ವಪಕ್ಷ ನಾಯಕರುಗಳ ಮೇಲೆಯೇ ಆರೋಪ ಮಾಡುತ್ತಿರುವುದರಿಂದ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಬಸವರಾಜ್ ಯತ್ನಾಳ್ ಪಾಟೀಲ್ ಅವರಿಗೂ ಕಾಂಗ್ರೆಸಿಗೂ ಯಾವುದೇ ಸಂಬಂಧವಿಲ್ಲವೆಂದು ಸಚಿವ ಎಂ ಬಿ ಪಾಟೀಲ್ ಅವರು ಹೇಳಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ಅವರು, ರಾಜ್ಯ ಬಿಜೆಪಿ ನಾಯಕರುಗಳ ಅಸಲಿಯತ್ತು ಬಿಜೆಪಿ ಶಾಸಕ ಬಸವರಾಜ್ ಯತ್ನಾಳ್ ಅವರ ಕೈಯಲ್ಲಿದೆ ಹಾಗಾಗಿ ಬಸವರಾಜ್ ಅವರು ಬಿಜೆಪಿ ನಾಯಕರ ಮೇಲೆ ಎಷ್ಟೇ ಆರೋಪ ಮಾಡಿದರು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಹೇಳಿದ್ದಾರೆ.

ಯತ್ನಾಳ್ ಹಿಂದಿನಿಂದ ಹೇಳುತ್ತ ಬಂದಿರುವುದು ಎಲ್ಲವೂ ಸತ್ಯವಾಗಿದೆ. ಹೀಗಾಗಿಯೇ ಯತ್ನಾಳ್ ವಿರುದ್ಧ ಬಿಜೆಪಿಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಯಾವುದೇ ಶಿಸ್ತು ಕ್ರಮ ಆಗದೇ ಇರುವುದನ್ನ ನೋಡಿದರೆ ಅವರ ಬಳಿ ಎಲ್ಲ ದಾಖಲೆ ಇದ್ದಂತೆ ಇದೆ. ಸರ್ಕಾರ ಕೂಡ ಈ ಬಗ್ಗೆ ತನಿಖೆ ಮಾಡ್ತಾ ಇದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಕಳೆದ ಬಾರಿ ಬಿಜೆಪಿ ಸರ್ಕಾರದಲ್ಲಿ ಕೊರೋನಾ ಸಂದರ್ಭದಲ್ಲಿ ಬೆಡ್ ದಂಧೆಯಿಂದ ಹಿಡಿದು ಲಸಿಕೆಯಲ್ಲೂ ಸಹ ಅಕ್ರಮವಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ಒಂದೊಂದಾಗಿ ನಾವು ಎಲ್ಲದರ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿ ಎಷ್ಟು ದುರ್ಬಲ ಆಗಿದೆ ಅಂದ್ರೆ ಯತ್ನಾಳ್ ಮೇಲೆ ಕ್ರಮ ಕೈಗೊಳ್ಳಲು ಆಗ್ತಿಲ್ಲ. ಯತ್ನಾಳ್ ವಿರುದ್ಧ ಕ್ರಮ ಆಗದೇ ಇರುವುದು ಬಿಜೆಪಿ ದೌರ್ಬಲ್ಯ. ನಿನ್ನೆ ಕೋರ್ ಕಮಿಟಿ ಮೀಟಿಂಗ್ ಮಾಡಿದ್ದಾರೆ, ಆದ್ರೂ ಯತ್ನಾಳ್ ಮೇಲೆ ಕ್ರಮ ಆಗ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ಯತ್ನಾಳ್ ಹೇಳಿದ್ದೆಲ್ಲ ಸತ್ಯ ಆಗಿದೆ. ಅದಕ್ಕಾಗಿಯೇ ಬಿಜೆಪಿಯವರು ಹೆದರಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

 

Related