ನಮ್ಮ ಶಾಸಕರಿಗೆ ರಾಜೀನಾಮೆ ನೀಡಲು 50 ಕೋಟಿ ಹಣದಾಸೆ ತೋರುತ್ತಿರುವ ಬಿಜೆಪಿ: ಸಿಎಂ

ನಮ್ಮ ಶಾಸಕರಿಗೆ ರಾಜೀನಾಮೆ ನೀಡಲು 50 ಕೋಟಿ ಹಣದಾಸೆ ತೋರುತ್ತಿರುವ ಬಿಜೆಪಿ: ಸಿಎಂ

ಬೆಂಗಳೂರು: ಲೋಕಸಭಾ ಚುನಾವಣೆ ಕಣ ರಂಗೇರಿದ್ದು ಎಲ್ಲ ಅಭ್ಯರ್ಥಿಗಳು ಬರದಿಂದ ಸಿದ್ಧತೆಗಳನ್ನು ಮಾಡಿಕೊಳ್ಳುವುದರ ಜೊತೆಗೆ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ.

ಇದರ ಮಧ್ಯದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರನ್ನು ರಾಜಿನಾಮೆ ನೀಡಲು ಬಿಜೆಪಿ ನಾಯಕರುಗಳು ನಮ್ಮ ಕಾಂಗ್ರೆಸ್ ಶಾಸಕರಿಗೆ ಸುಮಾರು 50 ಕೋಟಿ ಆಮಿಷವೊಡಿದೆ ಎಂದು ಬಿಜೆಪಿ ವಿರುದ್ದ ಗಂಭೀರವಾಗಿ ಆರೋಪ ಮಾಡಿದ್ದಾರೆ.

ಬಿಜೆಪಿಯು ನಮ್ಮ ಯಶಸ್ಸನ್ನು ಸಹಿಸಿಕೊಳ್ಳದೆ ನಮ್ಮ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುವಂತೆ ಮಾಡುತ್ತಿದೆ ಎಂದು ಹೇಳಿದರು. ಅಕ್ರಮದ ಮೂಲಕ ಸಂಪತ್ತು ಗಳಿಸಿದ ಶ್ರೀಮಂತರು ವಿರೋಧ ಪಕ್ಷಗಳಲ್ಲಿ ಮಾತ್ರ ಇದ್ದಾರೆಯೇ? ಬಿಜೆಪಿಯಲ್ಲಿ ಯಾರೂ ಇಲ್ಲವೇ? ಬಿಜೆಪಿ ಅವರೇ ಭ್ರಷ್ಟಾಚಾರದ ಮೂಲ ಪಿತಾಮಹರು ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಇಂದಿಗೂ ಅವರು ಆಪರೇಷನ್ ಕಮಲಕ್ಕೆ ಪ್ರಯತ್ನಿಸುತ್ತಿದ್ದಾರೆ. ನಮ್ಮ ಶಾಸಕರಿಗೆ ರಾಜೀನಾಮೆ ನೀಡುವಂತೆ 50 ಕೋಟಿ ರೂ. ಆಮಿಷವೊಡ್ಡತ್ತಿದ್ದಾರೆ. ನಿಮ್ಮ ಚುನಾವಣಾ ವೆಚ್ಚಕ್ಕೂ ಹಣ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಯಾವ ಹಣದ ಭರವಸೆ ನೀಡುತ್ತಿದ್ದಾರೆ? ಅದು ಕಪ್ಪು ಹಣ ಅಲ್ಲವೇ? ಅದು ಭ್ರಷ್ಟಾಚಾರದ ಹಣವಲ್ಲವೇ? ಎಂದು ಸಿಎಂ ಕೆಂಡಕಾರಿದರು.

 

Related