ಸ್ವಪಕ್ಷದ ʼಸದಸ್ಯೆʼಯನ್ನೇ ತಳ್ಳಾಡಿದ ಬಿಜೆಪಿ ಶಾಸಕ

ಸ್ವಪಕ್ಷದ ʼಸದಸ್ಯೆʼಯನ್ನೇ ತಳ್ಳಾಡಿದ ಬಿಜೆಪಿ ಶಾಸಕ

ಬಾಗಲಕೋಟೆ : ಜಿಲ್ಲೆಯಲ್ಲಿ ನ.9ರಂದು ನಡೆಯುತ್ತಿದ್ದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಮತದಾನ ಮಾಡಲು ಬಂದ ತಮ್ಮದೇ ಪಕ್ಷದ ಸದಸ್ಯೆಯನ್ನ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಅಡ್ಡಗಟ್ಟಿ ಎಳೆದಾಡಿದ್ದಾರೆ. ಮಹಿಳೆಯೊಬ್ಬರ ಬಳಿ ಆಸಭ್ಯವಾಗಿ ವರ್ತಿಸಿದ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದು ಸವದಿ ಪ್ರತಿನಿಧಿಸುವ ತೇರದಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಹಾಲಿಂಗಪುರ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿತ್ತು. 23 ಸದಸ್ಯರ ಬಲದ ಪುರಸಭೆಗೆ 13 ಬಿಜೆಪಿ ಹಾಗೂ 10 ಮಂದಿ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದಾರೆ. ಬಹುಮತ ಇದ್ದರು ಬಿಜೆಪಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಅಭ್ಯರ್ಥಿಗಳ ವಿಚಾರದಲ್ಲಿ ಅಸಮಾಧಾನವಿತ್ತು ಎಂದು ಹೇಳಿದರು.

Related