ಕಾಂಗ್ರೆಸ್ ತೊರೆದು ಬಿಜೆಪಿ ಗೆ ಸೇರ್ಪಡೆ : ಪ್ರಮೋದ್ ಮದ್ವರಾಜ್

ಉಡುಪಿ: ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ಪ್ರಮೋದ್ ಮಧ್ವರಾಜ್​ಗೆ ಬಿಜೆಪಿಯಲ್ಲಿ ವೇದಿಕೆ ಸಿಗುವುದಿಲ್ಲ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹೇಳಿಕೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದ್ದಾರೆ.


ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನ ಸಂಪ್ರದಾಯಕ್ಕೂ ಬಿಜೆಪಿ ಸಂಪ್ರದಾಯಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಕಾಂಗ್ರೆಸ್ ವೇದಿಕೆಗಳಲ್ಲಿ ಜನಜಂಗುಳಿ ಇರುತ್ತದೆ. ಎಲ್ಲರೂ ವೇದಿಕೆಗೆ ಹತ್ತುವವರೇ ಇರುವುದು. ಬಿಜೆಪಿಯಲ್ಲಿ ಹಾಗಿಲ್ಲ, ಶಿಸ್ತಿದೆ. ಬಿಜೆಪಿಯಲ್ಲಿ ಮಂತ್ರಿ, ಶಾಸಕ, ಸಂಸದರು ಕೂಡಾ ಕೆಳಗೆ ಕುಳಿತುಕೊಳ್ಳುತ್ತಾರೆ.. ಬಿಜೆಪಿಯ ಸಂಪ್ರದಾಯವನ್ನು ಡಿಕೆ ಶಿವಕುಮಾರ್ ಕಲಿಯುವುದು ಒಳ್ಳೆಯದು. ವೇದಿಕೆ ಹುಡುಕಿಕೊಂಡು ಹೋಗುವ ಜಾಯಮಾನ ನನ್ನದಲ್ಲ. ಬಿಜೆಪಿಗೆ ಕಾರ್ಯಕರ್ತನಾಗಿ ಸೇರಿದ್ದೇನೆ, ಕಾರ್ಯಕರ್ತನೊಟ್ಟಿಗೆ ಕುಳಿತುಕೊಳ್ಳುತ್ತೇನೆ. ಇದರಲ್ಲಿ ನನಗೆ ಯಾವ ಮುಜುಗರ, ಬೇಸರ ಇಲ್ಲ ಎಂದಿದ್ದಾರೆ.
ಇನ್ನು ನಾನು ಯೋಚನೆ ಮಾಡಿಯೇ ಬಿಜೆಪಿ ಸೇರ್ಪಡೆಯಾಗಿದ್ದೇನೆ. ನಾನು ಪಶ್ಚಾತ್ತಾಪ ಪಡುವ ಪ್ರಮೇಯವೇ ಬರುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷ , ಉಡುಪಿ ಜಿಲ್ಲೆಯಲ್ಲಿ ನನ್ನನ್ನು ಕಳೆದುಕೊಂಡು ಪಶ್ಚಾತ್ತಾಪ ಪಡುವ ದಿನ ದೂರ ಇಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ಪಶ್ಚಾತ್ತಾಪ ಪಡುತ್ತದೆ ಎಂದರು.

Related