ಸಿದ್ದರಾಮಯ್ಯ ಹುಚ್ಚು ಗಿರಾಕಿ ರೀತಿ ಆಡಬಾರದು : ಸಿ.ಟಿ ರವಿ ವ್ಯಂಗ್ಯ

ಸಿದ್ದರಾಮಯ್ಯ ಹುಚ್ಚು ಗಿರಾಕಿ ರೀತಿ ಆಡಬಾರದು : ಸಿ.ಟಿ ರವಿ ವ್ಯಂಗ್ಯ

ನವದೆಹಲಿ: ಶ್ರೀರಾಮ ಆರ್ಯನೋ, ದ್ರಾವಿಡನೋ ಎನ್ನುವುದು ಸಿದ್ದರಾಮಯ್ಯ ಅವರು ಹೇಳಬೇಕು. ಒಂದು ವೇಳೆ ಶ್ರೀರಾಮ ಆರ್ಯನಾದರೇ ದ್ರಾವಿಡರಾಗಿರುವ ಸಿದ್ದರಾಮಯ್ಯ ತಮ್ಮ ಹೆಸರಿನಲ್ಲಿ ರಾಮನನ್ನು ಏಕೆ ಸೇರಿಸಿಕೊಂಡಿದ್ದಾರೆ ಎನ್ನುವುದನ್ನು ತಿಳಿಸಬೇಕು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಆರ್ಯ ದ್ರಾವಿಡ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿ.ಟಿ.ರವಿ ಅವರು, ಸಿದ್ದರಾಮಯ್ಯ ಅವರು ಸತ್ತು ಹೋಗಿದ್ದ ವಿಷಯಕ್ಕೆ ಜೀವ ತುಂಬಿದ್ದಾರೆ. ಆರ್ಯ ದ್ರಾವಿಡ ಎನ್ನುವ ವಾದವನ್ನು ಐರಿಷ್ ಪಾದ್ರಿ ಮಂಡಿಸಿದ್ದರು. ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದರು.

ನಿಮ್ಮ ದೃಷ್ಟಿಯಲ್ಲಿ ವಾಲ್ಮೀಕಿ ಯಾರು? ಮಹಾಭಾರತ ರಚಿಸಿದ ವ್ಯಾಸ ಯಾರು? ಚಂದ್ರಗುಪ್ತ ಮೌರ್ಯನನ್ನು ಯಾರಿಗೆ ಹೋಲಿಸ್ತಿರಿ? ಕಾಳಿದಾಸ, ಅಹಲ್ಯಬಾಯಿ ಹೋಳ್ಕರ್ ಅವರನ್ನು ಎಲ್ಲಿಗೆ ಸೇರಿಸ್ತಿರಿ? ನಿಮ್ಮದು ಅರೆಬರೆ ತಿಳುವಳಿಕೆ. ಸೀತೆ ರಾಮನನ್ನು ಆರ್ಯ ಎಂದು ಕರೆದಿದ್ದರು, ಆರ್ಯ ಎಂದರೆ ಒಡೆಯ ಎಂದರ್ಥ ಎಂದು ವಾಗ್ದಾಳಿ ಮಾಡಿದರು.

ಒಡೆದು ಆಳುವ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಉತ್ತರ, ದಕ್ಷಿಣದಲ್ಲಿ ಶಿವನನ್ನು, ವಿಷ್ಣುವನ್ನು ಪೂಜಿಸುತ್ತಾರೆ. ರಾಮ, ಶಿವ, ಕೃಷ್ಣ ಕಪ್ಪು ಅವರನ್ನು ಯಾರಿಗೆ ಹೋಲಿಸ್ತಿರಿ? ಪಕ್ಷದೊಳಗೆ ಆಗುತ್ತಿರುವ ಪೈಪೋಟಿಯನ್ನು ಎದುರಿಸಲಾಗುತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಏನೇನೋ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Related