ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ ಡಿಸಿಎಂ ವ್ಯಗ್ಯ

ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ ಡಿಸಿಎಂ ವ್ಯಗ್ಯ

ಬೆಂಗಳೂರು: ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಅವರ ಮನೆ ದೋಸೆ ತೂತಿದ್ದರು ಸಹ ಪಕ್ಕದ ಮನೆ ದೋಸೆ ತೂತಿದಿಯಲ್ಲ ಎಂದು ಇಣುಕಿ ನೋಡಲು ಹೋಗುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವ್ಯಂಗ್ಯವಾಡಿದರು.

ನಗರದಲ್ಲಿ ಇಂದು ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, ಬಿಜೆಪಿಯವರು ಅಧಿಕಾರಾವಧಿಯಲ್ಲಿ ಏನು ಮಾಡಿದ್ರು ಎಂದು ಜನರಿಗೆ ಗೊತ್ತಿಲ್ಲ ಎಂದು ತಿಳಿದು ಕೊಂಡಿದ್ದಾರೆ. ‌ಜನರು ಅವರನ್ನು ಎಲ್ಲಿ ಕೂರಿಸಬೇಕು ಅಲ್ಲಿ‌ಕೂರಿಸಿದ್ದಾರೆ. ಒಂದು ವಿಪಕ್ಷ ನಾಯಕರನ್ನ ಮಾಡಲು ಆಗುತ್ತಿಲ್ಲ‌ನನಗೆ ಹೇಳುತ್ತಾರಲ್ಲ, ಬಿಜೆಪಿ ಸರ್ಕಾರದಲ್ಲಿ ಹಿಂಸಾಚಾರದ ಪ್ರಕರಣಗಳು ವಾಪಸ್ ಪಡೆದಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

2019 ರಲ್ಲಿ ಒಟ್ಟು 385 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿದೆ. ಸಾವಿರಕ್ಕೂ ಹೆಚ್ಚು ಘಟನೆಗಳಿವೆ ಆರಂಭದಲ್ಲಿ 7361 ರೌಡಿ ಶೀಟರ್ ಗಳನ್ನು ಕೈ ಬಿಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ, ಮಾಧುಸ್ವಾಮಿ, ಅಂಗಾರ, ಅರುಣ್ ಕುಮಾರ್ , ಜಿ ಪಾಟೀಲ್, ಭೋಪಯ್ಯ, ದೊಡ್ಡನಗೌಡರುವೀರಣ್ಣ ಚರಂತಿಮಠ್, ಎಸ್.ಆರ್ ವಿಶ್ವನಾಥ್, ಬಿ.ಎಸ್ ಪಾಟೀಲ್, ಸುಭಾಸ್ ಗುತ್ತೆದಾರ್, ರಾಜಕುಮಾರ ಪಾಟೀಲ್, ರವೀಂದ್ರನಾಥ್ ಮಾಡಳ್ ವಿರೂಪಾಕ್ಷಪ್ಪ. ಆನಂದ್ ಮಾಮನಿ, ಅರವಿಂದ ಬೆಲ್ಲದ್, ಸವದತ್ತಿ ಪಾಟೀಲ್, ಎಸ್.ಕೆ ಬೆಳ್ಳುಬ್ಬಿ, ಎನ್ ರವಿಕುಮಾರ್ ಇರುವರೆಲ್ಲ ವಾಪಸ್ ಗೆ ಮನವಿ ಮಾಡಿದ್ರು. ಇದರ ದಾಖಲೆ ನಾನು ಬಿಡುಗಡೆ ಮಾಡ್ತೇನೆ.

ಅವರು ರಾಜಕಾರಣದಲ್ಲಿ ಕಾರ್ಯಕರ್ತರು. ನಾವು ಯಾರೂ ಅಮಾಯಕರು ಇದರೆ ಅವರಿಗೆ ಅನ್ಯಾಯ ಆಗಬಾರದು ಎಂದು ನಾವು ಮನವಿ ಮಾಡಿದ್ದೇವೆ. ಕಾನೂನು ಪ್ರಕಾರ ಪರಿಶೀಲನೆ ಮಾಡ್ತಾರೆ, ಕಾನೂನು ಚೌಕಟ್ಟಿನಲ್ಲಿ ಮಾಡಲು ಅವಕಾಶ ಇದ್ರೆ ಅದಕ್ಕೊಂದು ಸಬ್ ಕಮಿಟಿಯಿದೆ. ಅಧಿಕಾರಿಗಳು ಮಾಡಬಹುದು ಎಂದಾದರೆ ಶಿಫಾರಸು ಮಾಡ್ತಾರೆ. ನನ್ನ ಮೇಲೂ ಬೇಕಾದಷ್ಟು ಕೇಸ್ ಹಾಕಿದ್ದಾರೆ. ಈಗಲೂ ಕೇಸ್ ಗಳು ನಡೆಯುತ್ತಿವೆ. ಇವೆಲ್ಲ ರಾಜಕೀಯ ಉದ್ದೇಶದಿಂದ ನಡೆಯುತ್ತಿವೆ‌. ಬಿಜೆಪಿಯವರಿಗೆ ಅರ್ಜೆಂಟ್ ಇದೆ ನೀವು ಅವರನ್ನು ತೋರಿಸುತ್ತಿದ್ದೀರಿ ಎಂದು ಕಿಡಿ ಕಾರಿದರು.

 

Related