ಸಚಿವ ವಿರುದ್ಧ ಬಿಜೆಪಿ ಆಗ್ರಹ

ಸಚಿವ ವಿರುದ್ಧ ಬಿಜೆಪಿ ಆಗ್ರಹ

ಬೆಳಗಾವಿ : ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿಕೆಗೆ ಬಿಜೆಪಿಯಲ್ಲೇ ಅಸಮಾಧಾನ ಭುಗಿಲೆದ್ದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಹೇಳಿಕೆ ಬಿ.ಸಿ ಪಾಟೀಲ್ ಹಿಂಪಡೆಯಬೇಕು ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಈರಣ್ಣಾ ಕಡಾಡಿ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಸ್ವಾಭಿಮಾನಿಗಳು, ಎಂದಿಗೂ ರೈತರು ಹೇಡಿಗಳಾಗಿಲ್ಲ. ಮಾತಿನ ಭರದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿರಬಹುದು. ಕೃಷಿ ಸಚಿವರಿಗೆ ತಮ್ಮ ಹೇಳಿಕೆ ವಾಪಸ್ ಪಡೆಯಲು ಮನವಿ ಮಾಡುತ್ತೇವೆ ಎಂದರು.

ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಅರ್ಥದಲ್ಲಿ ಹೇಳಲು ಹೋಗಿ ಅಪಾರ್ಥ ಸೃಷ್ಟಿಯಾಗಿದೆ. ಕೃಷಿ ನಂಬಿದ ರೈತ ಸ್ವಾಭಿಮಾನಿ, ಯಾರ ಬಳಿಯೂ ಕೈಯೊಡ್ಡಿ ಬದುಕಲ್ಲ. ಇನ್ನೊಬ್ಬರಿಗೆ ಅನ್ನ ಕೊಟ್ಟು ತಾನು ಸಹ ಬದುಕಿದಂತಹ ಸ್ವಾಭಿಮಾನಿ. ರೈತರು ಯಾವತ್ತೂ ಹೇಡಿಗಳು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಕೃಷಿ ಸಚಿವರು ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಕಳಕಳಿ ಇಟ್ಟುಕೊಂಡು ಹೇಳಲು ಹೋಗಿದ್ದಾರೆ.

Related