ಡಿಸಿಎಂಗೆ ಬಿಗ್ ರಿಲೀಫ್

ಡಿಸಿಎಂಗೆ ಬಿಗ್ ರಿಲೀಫ್

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಸಂಬಂಧಪಟ್ಟಂತೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ಕೇಸು ದಾಖಲು ಮಾಡಲಾಗಿತ್ತು.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಅವರು, ಯಾರು ಯಾರು ಏನು ಮಾತನಾಡಿದ್ದಾರೆ ಎಲ್ಲ ನಮ್ರತೆಯಿಂದ ನೋಡ್ತಿದ್ದೇನೆ, ನೋಡಿದ್ದೇನೆ. ಸೂಕ್ತ ಸಮಯದಲ್ಲಿ ಅದಕ್ಕೆಲ್ಲ ಉತ್ತರ ಕೊಡ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಾನು ಮಾಡಿದ್ದೆಲ್ಲ ಪಾರ್ಟಿ ಸಲುವಾಗಿ ಮಾಡಿದ ಕೆಲಸ. ಪಕ್ಷಕ್ಕೋಸ್ಕರ ನಾನು ಕೆಲಸ ಮಾಡಿದ್ದು. ಸಾಕಷ್ಟು ಅನುಭವಿಸಿದ್ದೇನೆ. ಮುಂದೆಯೂ ಕೂಡ ತೊಂದರೆ ಕೊಡ್ತೀನಿ ಅಂದ್ರೆ ಅದನ್ನು ನೋಡಲು ಭಗವಂತ ಇದ್ದಾನೆ. ನನಗೆ ತೊಂದರೆ ಕೊಟ್ಟಿದ್ದಕ್ಕೆ ಏನಾಯ್ತು ಅಂತ ರಾಜ್ಯದ ಜನರೇ ನೋಡಿದ್ದಾರೆ. ನ‌ನ್ನ ಪರವಾಗಿ ನಿಂತ ಎಲ್ಲರಿಗೂ ಕೋಟಿ ವಂದನೆ ಅಂತ ತಿಳಿಸಿದರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿಗೆ ರಿಲೀಫ್ ಸಿಕ್ಕಿದೆ. ಪ್ರಕರಣ ಸಂಬಂಧ ವಾದ- ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ರಾಜ್ಯ ಸರ್ಕಾರದ ಆದೇಶವನ್ನು ಇದುವರೆಗೂ ಯಾರೂ ಪ್ರಶ್ನೆ ಮಾಡಿಲ್ಲ. ಹೀಗಾಗಿ ಸಿಬಿಐ ಪರ ವಕೀಲರ ವಾದ ಪರಿಗಣಿಸಲು ಸಾಧ್ಯವಿಲ್ಲ. ಅರ್ಜಿದಾರರು ಮನವಿ ಹಿಂಪಡೆಯಲಾಗಿದೆ ಎಂದು ಸಿಬಿಐ ವಾದವನ್ನು ಹೈಕೋರ್ಟ್ (HighCourt) ವಿಭಾಗೀಯ ಪೀಠ ತಳ್ಳಿ ಹಾಕಿದೆ. ಈ ಮೂಲಕ ಡಿಕೆಶಿಗೆ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿದೆ.

Related