ತಂತ್ರಜ್ಞಾನ ಜಗತ್ತಿಗೆ ದೊಡ್ಡ ತಲೆನೋವು

ತಂತ್ರಜ್ಞಾನ ಜಗತ್ತಿಗೆ ದೊಡ್ಡ ತಲೆನೋವು

ವಿಜಯಪುರ : ವೈರಸ್ ಹಾವಳಿ ನಂತರದಲ್ಲಿ, 5ಜಿ ತಂತ್ರಜ್ಞಾನ ಜಗತ್ತಿಗೆ ದೊಡ್ಡ ತಲೆನೋವಾಗಲಿದೆ. ಅಲ್ಲದೆ ಸ್ಮರ‍್ಟ್ಪೋನ್ ಬಳಕೆ ಹೆಚ್ಚಾದಂತೆ ಕ್ಯಾನ್ಸರ್ ರೋಗಿಗಳ ಹೆಚ್ಚಳ ಕಂಡುಬರುವುದು ಎಂದು ಅಮೇರಿಕಾದ ವಿಜ್ಞಾನಿ ಡಾ.ಡೇವಿಡ್ ಕಾರ್ಪೆಂಟರ್ ಹೇಳಿದರು.

ಯುನೆಸ್ಕೊ ಜೀವ ವಿಜ್ಞಾನ ಪೀಠ, ಬಿ.ಎಲ್. ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಏರ್ಪಡಿಸಿದ್ದ ವಿದ್ಯುತ್ಕಾಂತೀಯ ಉಪಕರಣ ಬಳಕೆಯಿಂದ ಪರಿಸರ ಮಾಲಿನ್ಯ-ಕೊರೋನಾ ವೈರಸ್- ಪ್ರಸ್ತುತ ಪರಿಕಲ್ಪನೆ ವಿಷಯದ ಕುರಿತು ಎರಡು ದಿನಗಳ ವೆಬಿನರ‍್ನಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಾಂತರಗಳಿAದ ಮಾನವ ಶರೀರದ ಮೇಲಿನ ಪರಿಣಾಮಗಳ ಕುರಿತು ಮಾತನಾಡಿದ ಅವರು ಹೆಚ್ಚು ಹೆಚ್ಚು ರೇಡಿಯೊ, ಟಿವಿ, ಮೈಕ್ರೋಓವನ್ಗಳು ಹಾಗೂ ವೈಫೈ ಬಳಕೆಯಿಂದ ಇವುಗಳಿಂದ ಹೊರಸುಸುವ ತರಂಗಾಂತರಗಳಿಂದ ರಾಸಾಯನಿಕ ಕಣಗಳಲ್ಲಿ ಬೇಧ, ವಿಕಲಾಂಗಜನನ, ಕ್ಯಾನ್ರ‍್ಗೆ ಕಾರಣವಾಗುತ್ತಿದೆ.

ವಿಶೇಷವಾಗಿ ಚಿಕ್ಕಮಕ್ಕಳಲ್ಲಿ ರಕ್ತದ ಕ್ಯಾನ್ಸರ್ ಕಾಯಿಲೆ ಹೆಚ್ಚುತ್ತಿರುವದು ಆತಂಕಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಒತ್ತಿ ಹೇಳಿದೆ ಎಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು.

ಸಂಯೋಜಕ ಡಾ.ಕುಶಾಲ್ ದಾಸ ಎರಡು ದಿನಗಳ ವೆಬಿನರ‍್ನ ಸ್ಥೂಲ ಪರಿಚಯ ಮಾಡಿ, ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಡಾ. ಲತಾ ಮಳ್ಳೂರು ಸ್ವಾಗತಿಸಿದರು. ಜಗತ್ತಿನ ವಿವಿಧ ವೈದ್ಯಕೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳಿಂದ 150 ಪ್ರತಿನಿಧಿಗಳು ವೆಬಿನರ‍್ನಲ್ಲಿ ಭಾಗವಹಿಸಿದರು.

Related