ದೊಡ್ಡಣ್ಣನಿಗೂ ಬಿಡದ ಕೊರೋನಾ

ದೊಡ್ಡಣ್ಣನಿಗೂ ಬಿಡದ ಕೊರೋನಾ

ವಾಷಿಂಗ್ಟನ್, ಏ. 1 : ಕೊರೋನಾ ಮಹಾಮಾರಿ ಅಟ್ಟಹಾಸ ನಡುವೆಯೇ ಅಮೇರಿಕಾ ದೇಶದಲ್ಲಿ ಮಂಗಳವಾರ ಒಂದೇ ದಿವಸಕ್ಕೆ 865 ಮಂದಿಯನ್ನು ಬಲಿ ಪಡೆದಿದೆ.
ಕೋವಿಡ್-19 ವೈರಸ್ ತನ್ನ ಪ್ರತಾಪ ಮುಂದುವರೆಸಿದ್ದು, ಒಂದೇ ದಿನ 865 ಜನರು ಬಲಿಯಾಗಿದ್ದು, ಅಮೇರಿಕಾದ ಜನತೆಗೆ ಮತ್ತೆ ಆತಂಕ ಸೃಷ್ಟಿಸಿದೆ. 24 ಗಂಟೆಗಳ ಅವಧಿಯಲ್ಲಿ ದಾಖಲಾದ ಅತಿದೊಡ್ಡ ಸಾವಿನ ಪ್ರಕರಣ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ವರದಿ ಮಾಡಿದೆ.
ಅಮೆರಿಕದಾದಲ್ಲಿ  3.008 ಜನರು ಮೃತರಾಗಿದ್ದರು.ಆದರೆ ಮಂಗಳವಾರ ಸಂಜೆ ವೇಳೆಗೆ ಇದರ ಪ್ರಮಾಣ 3,873 ಕ್ಕೆ ತಲುಪಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ದೇಶದಲ್ಲಿ ಒಟ್ಟಾರೆಯಾಗಿ 1,88.172 ಸೋಂಕಿತರಿದ್ದು ಚೀನಾ,ಇಟಲಿ ಸ್ಪೇನ್ ಗಿಂತ ಅತೀ ಹೆಚ್ಚು ಭಾಧಿತವಾದ ದೇಶ ಎಂದೇ ಪರಿಗಣಿಸಲ್ಪಟ್ಟಿದೆ. ಜಗತ್ತಿನಾದ್ಯಂತ ಕೋವಿಡ್-19 ಮಾಹಾಮಾರಿಗೆ 42, 151 ಜನರು ಬಲಿಯಾಗಿದ್ದು 8,58, 669 ಕ್ಕಿಂತ ಹೆಚ್ಚು ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿ ತಿಳಿಸಿದೆ.

Related