ಬೆಂಗಳೂರು: ಕೆಜಿಎಫ್ ಬಾಬು ಅವರ ವಿರುದ್ಧ ದೊಡ್ಡ ಆರೋಪ ಒಂದು ಕೇಳಿಬಂದಿದ್ದು, ಸ್ಥಳೀಯ ನಿವಾಸಿಗಳು ಕೆಜಿಎಫ್ ಬಾಬು ವಿರುದ್ಧ ಪ್ರತಿಭಟನೆ ಕೈಗೊಂಡಿದ್ದರು.
ಕೆಜಿಎಫ್ ಬಾಬು ಅವರು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಲವು ಭರವಸೆಗಳನ್ನು ನೀಡಿದ್ದರು ಅದನ್ನು ಇಲ್ಲಿಯವರೆಗೂ ಕೂಡ ಈಡೇರಿಸಿಲ್ಲ ಹಾಗಾಗಿ ಚಿಕ್ಕಪೇಟೆ ನಿವಾಸಿಗಳು ಮಾಜಿ ಅಭ್ಯರ್ಥಿ ಕೆಜಿಎಫ್ ಬಾಬು ಅವರ ಮನೆಯ ಮುಂದೆ ಬೃಹತ್ ಪ್ರತಿಭಟನೆಯನ್ನು ನಡೆಸಿದ್ದಾರೆ.
ಚುನಾವಣೆಗೆ ಮೊದಲು ನಾವು ಮನೆ ಬೀಳಿಸೋಣ, ಬಾಬು ಸಾರ್ ಮನೆ ಕಟ್ಟಿಸಿ ಕೊಡ್ತಾರೆ ಅಂತ ಭರವಸೆಯಿಂದ ಇಟ್ಟಿದ್ದೇವೆ. ಆದರೆ ಈಗ ಅವರು ಮನೆಯ ಹೆಸರು ಕೇಳ್ತಿಲ್ಲ. ಚೆಕ್ ಕೂಡ ಬೌನ್ಸ್ ಆಗಿದೆ, ಸಿಲಿಂಡರ್ ಕೂಡ ನೀಡಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಜನರು ತಮ್ಮ ಬೇಡಿಕೆ ಈಡೇರಿಸಲು ಸ್ಥಳೀಯ ಅಧಿಕಾರಿಗಳ ಸಹಾಯವನ್ನು ಬೇಡುತ್ತಿದ್ದಾರೆ. ಕೆಲವು ಪ್ರತಿಭಟನಾಕಾರರು ವಿಧಾನಸಭೆ ಅಥವಾ ಪೊಲೀಸ್ ಠಾಣೆಗೂ ದೂರು ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
