ನೀರಿನಲ್ಲಿ ಬಿದ್ರೂ ಹಾಳಾಗಿಲ್ಲ ಐಫೋನ್..!

ನೀರಿನಲ್ಲಿ ಬಿದ್ರೂ ಹಾಳಾಗಿಲ್ಲ ಐಫೋನ್..!

ಲಂಡನ್, ಏ. 06: ನೀರಿಗೆ ಬಿದ್ಮೇಲೆ ಫೋನ್ ಕಥೆ ಮುಗಿದಂತೆ. ಸತತ ಎರಡು ತಿಂಗಳು ನೀರಿನಲ್ಲಿದ್ರೂ ಹಾಳಾಗಿಲ್ಲ. ಫೋನ್ ಗಳು ವಾಟರ್ ಪ್ರೂಫ್ ನೊಂದಿಗೆ ಬರುತ್ವೆ. ಅವು ಕೆಲ ಸಮಯ ನೀರಿನಲ್ಲಿದ್ರೂ ಸುರಕ್ಷಿತವಾಗಿರುತ್ತವೆ. ಆದ್ರೆ ಐಫೋನ್ 8 ಎಲ್ಲ ದಾಖಲೆಗಳನ್ನು ಮುರಿದಿದೆ. ಲಂಡನ್ ನಲ್ಲಿ ನಡೆದಿದೆ. ಮಹಿಳೆಯೊಬ್ಬಳು ಲಂಡನ್ ಥೇಮ್ಸ್ ನದಿಯಲ್ಲಿ ಬಾತುಕೋಳಿಗೆ ಆಹಾರ ಹಾಕಲು ಹೋದಾಗ ಮೊಬೈಲ್ ನದಿಯಲ್ಲಿ ಬಿದ್ದಿತ್ತು. ಫೋನ್ ನಲ್ಲಿ ಸಾಕಷ್ಟು ಫೋಟೋಗಳಿತ್ತು. ಫೋನ್ ಗಾಗಿ ನದಿಗೆ ಹಾರುವ ಪ್ಲಾನ್ ಮಾಡಿದ್ದಳಂತೆ. ಆದ್ರೆ ಅಪಾಯ ಅರಿತು ವಾಪಸ್ ಬಂದಿದ್ದಳಂತೆ.
ಕೆಲ ದಿನಗಳ ನಂತ್ರ ಪ್ರೇಮಿ ಜೊತೆ ಅಲ್ಲಿಗೆ ಹೋದಾಗ ನದಿಯಲ್ಲಿ ಐಫೋನ್ ಕಾಣಿಸಿತ್ತಂತೆ. ಆದ್ರೆ ಆಗ್ಲೂ ವಾಪಸ್ ಬಂದ ಯುವತಿ ಮೀನು ಹಿಡಿಯುವ ನೆಟ್ ತಯಾರಿಸಿ ಫೋನ್ ತೆಗೆದಿದ್ದಾಳೆ. ಎರಡು ತಿಂಗಳಾದ್ರೂ ಫೋನ್ ಸರಿಯಾಗಿತ್ತು ಎನ್ನಲಾಗಿದೆ.

Related