ಭಾಯಿಯೋ ಬಹನೋ ಗ್ಯಾಸ್ ಸಿಲಿಂಡರ್ ಗೆ ಕೈ ಮುಗಿದು ಮತದಾನ ಮಾಡಿ: ಡಿಕೆಶಿ ಮೋದಿ ಟಾಂಗ್

ಭಾಯಿಯೋ ಬಹನೋ ಗ್ಯಾಸ್ ಸಿಲಿಂಡರ್ ಗೆ ಕೈ ಮುಗಿದು ಮತದಾನ ಮಾಡಿ: ಡಿಕೆಶಿ ಮೋದಿ ಟಾಂಗ್

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆ ದಿನಾಂಕವು ಸಮೀಪಿಸುತ್ತಿದ್ದು ದಿನೇ ದಿನೇ ರಣರಂಗದಂತೆ ಸಜ್ಜಾಗುತ್ತಿದೆ.

ಹೌದು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಗುದ್ದಾಟ ದಿನ ಹೆಚ್ಚಾಗುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಕೊಟ್ಟ ನಾಲ್ಕು ಗ್ಯಾರಂಟಿ ಘೋಷಣೆಗಳನ್ನು ಈಡೇರಿಸದೆ ಇದ್ದಲ್ಲಿ ಮತ್ತೆ ಮತ ಕೇಳಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಜಾರಿ ಅಸಾಧ್ಯ ಎಂದ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದರು.

ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ಕೊಡುತ್ತೇವೆ ಎಂದು ನಾವು ಭರವಸೆ ಕೊಟ್ಟಿಲ್ಲ. ಬಿಜೆಪಿ ಪ್ರಣಾಳಿಕೆ ನೋಡಿ, ರೈತರ ಸಾಲಾ ಮನ್ನಾ ಮಾಡುತ್ತೇವೆ ಎಂದಿದ್ದಾರೆ. ಸರ್ಕಾರದ ಅಧಿಕೃತ ಜಾಹೀರಾತಿನಲ್ಲೂ ಮಹಿಳೆಯರಿಗೆ 3 ಸಾವಿರ ಕೊಡುವ ಭರವಸೆ ಕೊಟ್ಟಿದ್ದಾರೆ .‌3 ರಿಂದ 10 ಗಂಟೆ ಉಚಿತ ವಿದ್ಯುತ್ ಕೊಡುವ ಭರವಸೆ ಕೊಟ್ಟಿದ್ದಾರೆ. ಹೀಗಿದ್ದರೂ, ಪ್ರಧಾನಿ ಮೋದಿ ನಮ್ಮ ಗ್ಯಾರಂಟಿ ಬಗ್ಗೆ ಮಾತನಾಡಿದ್ದು ಸಂತೋಷ ಎಂದರು.

ನಮ್ಮ ಸರ್ಕಾರದ ಅವಧಿಯಲ್ಲಿ ಗ್ಯಾಸ್ ದರ 50 ರೂಪಾಯಿ ಹೆಚ್ಚಳ ಆಗಿದ್ದಾಗ ಸಿಲಿಂಡರ್ ಗೆ ಕೈಮುಗಿದು ಓಟ್ ಹಾಕಿ ಎಂದು ಮೋದಿ ಕರೆ ಕೊಟ್ಟಿದ್ದರು. ಇವಾಗ ನಾನೂ ಕೂಡಾ ಭಾಯಿಯೋ ಬಹನೋ ಗ್ಯಾಸ್ ದರ ಏರಿಕೆ ಆಗಿದೆ ಸಿಲಿಂಡರ್ ಗೆ ಕೈ ಮುಗಿದು ಮತದಾನ ಮಾಡಿ ಎಂದು ಕರೆ ಕೊಡುತ್ತೇನೆ. ನಾವು ಕೊಟ್ಟ ನಾಲ್ಕು ಭರವಸೆ ಈಡೇರಿಸುತ್ತೇವೆ. ಗೃಹ ಜ್ಯೋತಿ 200 ಯೂನಿಟ್ ವಿದ್ಯುತ್ ಉಚಿತ, 2000 ಪ್ರತಿ ತಿಂಗಳು ಖಚಿತ, ಅನ್ನ ಭಾಗ್ಯ ಹತ್ತು ಕೆಜಿ ಅಕ್ಕಿ ನಿಶ್ಚಿತ, ಯುವ ನಿಧಿ ಖಂಡಿತಾ. ನಾಲ್ಕು ಘೋಷಣೆ ಜಾರಿ ಮಾಡುತ್ತೇವೆ ಎಂದರು‌.

ಮೇ 10 ನೇ ತಾರೀಕು ರಾಜ್ಯದ ಭವಿಷ್ಯ ಬದಲಾವಣೆ ದಿನ. ಗ್ಯಾರಂಟಿ ಕಾರ್ಡ್ ಗೆ ಮುದ್ರೆ ಹಾಕುವ ದಿನ. ಅಧಿಕಾರಕ್ಕೆ ಬಂದ ಮೊದಲನೇ ಕ್ಯಾಬಿನೆಟ್ ನಲ್ಲೇ ನಿರ್ಧಾರ ಮಾಡುತ್ತೇವೆ. ನಾಲ್ಕು ಗ್ಯಾರಂಟಿ ಜಾರಿಗೊಳಿಸುತ್ತೇವೆ. ಜೂನ್ ತಿಂಗಳಲ್ಲಿ ಗ್ಯಾರಂಟಿ ಘೋಷಣೆ ಜಾರಿಗೊಳಿಸುತ್ತೇವೆ ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲ್ಲ, ಅದಕ್ಕೆ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ಗ್ಯಾರಂಟಿ ಘೋಷಣೆ ಜಾರಿಗೆ ತಂದಿಲ್ಲ ಎಂದರೆ ಮುಂದೆ ಮತ ಕೇಳಲ್ಲ. ಆದರೆ ಮೋದಿ ಹತಾಶರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Related