ಲೆಕ್ಕ ಎಲ್ಲರಿಗೂ ಕೊಡುತ್ತೇವೆ

ಲೆಕ್ಕ ಎಲ್ಲರಿಗೂ ಕೊಡುತ್ತೇವೆ

ಬೆಂಗಳೂರು: ಬಿಎಸ್ಸಿ ಅಗ್ರಿಕಲ್ಚರ್ ಹಾಗೂ ಬಿಟೆಕ್ ಇಂಜಿನಿಯರಿಂಗ್ ಸೇರಿದಂತೆ ಕೃಷಿ ವಿಶ್ವವಿದ್ಯಾಲಯದ ಎಲ್ಲಾ ಬಿಎಸ್ಸಿ ಅಂತಿಮ ಪದವಿ ಪರೀಕ್ಷೆಗಳು ಮುಗಿದಿದ್ದು ಜುಲೈ ಅಂತ್ಯದೊಳಗೆ ಬಿಎಸ್ಸಿ ಅಗ್ರಿ ಡಿಗ್ರಿ ಪ್ರಮಾಣಪತ್ರ ಮತ್ತು ಅಂಕಪಟ್ಟಿ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಅಂತಿಮ ವರ್ಷದ ಎಂಎಸ್ಸಿ ಹಾಗೂ ಪಿಹೆಚ್‍ಡಿ ಪದವಿ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಆ.31ರೊಳಗೆ ಸಲ್ಲಿಸಬೇಕು. ಸೆ. 15ರಿಂದ ಫಲಿತಾಂಶ ಮತ್ತು ಪ್ರಮಾಣಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸೆ.30ರೊಳಗೆ ಎಲ್ಲಾ ಎಂಎಸ್ಸಿ, ಪಿಹೆಚ್‍ಡಿ ವಿದ್ಯಾರ್ಥಿಗಳು ತಮ್ಮ ಪದವಿ ಮುಗಿಸಬಹುದಾಗಿದೆ ಎಂದು ಹೇಳಿದರು.

ಲೆಕ್ಕ ಎಲ್ಲರಿಗೂ ಕೊಡುತ್ತೇವೆ

ಕೋವಿಡ್ ಚಿಕಿತ್ಸೆ ಖರ್ಚು ವೆಚ್ಚದ ಬಗ್ಗೆ ಸರ್ಕಾರ ಲೆಕ್ಕ ಖಂಡಿತ ಕೊಡುತ್ತದೆ. ಅದು ನ್ಯಾಯಯುತವೂ ಹೌದು. ಕಾಂಗ್ರೆಸ್ ಅವರು ಲೆಕ್ಕಕೊಡಿ ಅಭಿಯಾನ ಮಾಡುವುದಕ್ಕಿಂತ ಜಾಗೃತಿ ಅಭಿಯಾನ ಮಾಡಿದರೆ ಒಳ್ಳೆಯದು. ಕಾಂಗ್ರೆಸ್ ಮಾಡುತ್ತಿರುವ ಆರೋಪವೆಲ್ಲವೂ ಸುಳ್ಳು ಎಂದು ಹೇಳಿದರು.

Related