ಬಿಬಿಎಂಪಿ ಆಯುಕ್ತ ದಿಢೀರ್ ಬದಲಾಗಿದ್ದೇಕೆ?

ಬಿಬಿಎಂಪಿ ಆಯುಕ್ತ ದಿಢೀರ್ ಬದಲಾಗಿದ್ದೇಕೆ?

ಬೆಂಗಳೂರು: ಕೋವಿಡ್ ಸಂಕಷ್ಟದ ಕಾಲದಲ್ಲಿಯೂ ಅಧಿಕಾರದಲ್ಲಿಯೂ ಬದಲಾವಣೆಯಾಗಿದ್ದು, ಬಿಬಿಎಂಪಿ ಆಯುಕ್ತ ಹುದ್ದೆಯಲ್ಲಿ ರಾಜ್ಯ ಸರ್ಕಾರ ಯಾವುದೇ ಸುಳಿವಿಲ್ಲದೆ ಬದಲಾಯಿಸಿದೆ.

ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್ ಅವರನ್ನು ಶನಿವಾರ ವರ್ಗಾವಣೆ ಆ ಹುದ್ದೆಗೆ ಈ ಹಿಂದೆ ಅಧಿಕಾರ ನಿರ್ವಹಿಸಿದ್ದ ಮಂಜುನಾಥ್ ಪ್ರಸಾದ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಅನಿಲ್ ಕುಮಾರ್ ಆಯ್ಕೆಯಾಗುವ ಮುನ್ನ ಮಂಜುನಾಥ್ ಪ್ರಸಾದ್ ಅವರು ಮೂರು ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದರು.  ಇದೀಗ  ಅನಿಲ್ ಕುಮಾರ್ ಅವರಿಗೆ ಸಾರ್ವಜನಿಕ ಉದ್ದಿಮೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಹೊಣೆ ವಹಿಸಲಾಗಿದೆ.

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅನಿಲ್ ಕುಮಾರ್ ವಿರುದ್ಧ ಹಲವು ಅಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬಳಿ ಅಸಮಾಧಾನ ಹೊರಹಾಕಿದ್ದರು. ಇದು ಅವರ ಅಧಿಕಾರಕ್ಕೆ ಕುತ್ತು ತಂದಿರಬಹುದು ಎಂದು ಹೇಳಳಾಗುತ್ತಿದೆ.

Related