ಪಿಓಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿ

  • In State
  • August 26, 2021
  • 432 Views
ಪಿಓಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿ

ತಾಳಿಕೋಟೆ : ಪಿಓಪಿ ಗಣೇಶಗಳನ್ನು ನಿಷೇಧಿಸಬೇಕೆಂದು ಪಟ್ಟಣದ ಹಸಿರು ಸಂಪದ ಬಳಗದವರು ತಹಶೀಲ್ದಾರ್ ಅನಿಲಕುಮಾರ ಢವಳಗಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

ಮಣ್ಣಿನಲ್ಲಿ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಿ, ಪಿಓಪಿಯಿಂದ ನಿರ್ಮಿಸಿದ ಮೂರ್ತಿಗಳ ಮಾರಾಟದಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ಜಲಮೂಲಗಳನ್ನು ಕಲುಷಿತಗೊಳಿಸುತ್ತಿದೆ. ಮಣ್ಣಿನಿಂದ ನಿರ್ಮಿಸಿದ ಗಣೇಶನ ಮೂರ್ತಿಗಳನ್ನೇ ತಯಾರಿಸಿ, ಮಾರಾಟ ಮಾಡುವಂತೆ ಜಿಲ್ಲಾ ಆಡಳಿತದಿಂದ ನಿರ್ದೇಶನ ನೀಡಿ, ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಗಣೇಶನ ಮೂರ್ತಿ ತಯಾರಕರು, ಮಾರಾಟಗಾರರಿಗೆ ಪೂರ್ವಭಾವಿ ಸಭೆಯನ್ನು ಆಯೋಜಿಸಿ, ಜಾಗೃತಿಯನ್ನುಂಟು ಮಾಡುವ ಕಾರ್ಯ ಕೈಗೊಳ್ಳುವಂತೆ ಹಸಿರು ಸಂಪದ ಪರಿಸರ ಬಳಗ ಮನವಿಯಲ್ಲಿ ಒತ್ತಾಯಿಸಿದರು.

ಬಳಗದ ಸಂಚಾಲಕ ಶರಣು ಗಡೇದ, ಸದಸ್ಯರುಗಳಾದ ಬಸವರಾಜ ಪಂಜಗಲ್ಲ, ಅಶೋಕ ಹಂಚಲಿ, ಅಪ್ಪಾಸಾಹೇಬಗೌಡ ಮೂಲಿಮನಿ, ರಾಜು ಹಂಚಾಟೆ, ಅನಿಲ ಇರಾಜ, ಸಿದ್ಧನಗೌಡ ಕಾಶಿನಕುಂಟಿ, ಕಾಶಿನಾಥ ಹಿರೇಮಠ, ವೀರೇಶ ಕೋರಿ, ಶಫೀಕ ಮುರಾಳ, ಎಸ್.ಕೆ.ಹೆಗರೆಡ್ಡಿ, ಬಸವರಾಜ ಹಾದಿಮನಿ ಇನ್ನಿತರರಿದ್ದರು.

Related