ಬೇಲ್ ಸಿಕ್ಕರೂ ಜೈಲಿನಿಂದ ಹೊರಬರಲಾಗದೇ ನಟಿ ಪರದಾಟ

ಬೇಲ್ ಸಿಕ್ಕರೂ ಜೈಲಿನಿಂದ ಹೊರಬರಲಾಗದೇ ನಟಿ ಪರದಾಟ

ಬೆಂಗಳೂರು : ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿಸುವಂತ ನಟಿ ರಾಗಿಣಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಇಂದು ವಕೀಲರು ಕೋರ್ಟ್ ಗೆ ಆದೇಶ ಪ್ರತಿ ಸಲ್ಲಿಸಿದ್ದರೂ, ಜಾಮೀನಿನ ವೇಳೆ ಶ್ಯೂರಿಟಿ ಕೊಡಲು ಯಾರು ಮುಂದೆ ಬಾರದ ಕಾರಣ, ನಟಿ ರಾಗಿಣಿ ಬಿಡುಗಡೆ ತಡವಾಗುತ್ತಿದೆ ಎಂದರು.

ನಿನ್ನೆ ನಟಿ ರಾಗಿಣಿ ದ್ವಿವೇದಿಗೆ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಹೀಗಾಗಿ 140 ದಿನಗಳ ಬಳಿಕ ನಟಿ ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ ಆದರೆ ಸುಪ್ರೀಂ ಕೋರ್ಟ್ ಆದೇಶ ಪ್ರತಿ ಎನ್.ಡಿ.ಪಿ ಎಸ್ ಕೋರ್ಟ್ಗೆ ತಲುಪೋದಕ್ಕೆ ತಡವಾಗಿ ಎರಡು ದಿನವೇ ಕಳೆದಿದೆ.

ಜೈಲಿನಿಂದ ನಟಿ ರಾಗಿಣಿ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಶ್ಯೂರಿಟಿ ಅಗತ್ಯ ವಿದೆ. ಇಂತಹ ಶ್ಯೂರಿಟಿ ನೀಡೋದಕ್ಕೆ ರಾಗಿಣಿ ಆಪ್ತರಾರು ಮುಂದೆ ಬರ್ತಾ ಇಲ್ಲ ಎಂದರು.

ಈ ಮೊದಲು ಇಬ್ಬರು ಮುಂದೆ ಬಿಂದಿದ್ದರೂ, ಅಂತಿಮ ಕ್ಷಣದಲ್ಲಿ ಹಿಂದೆ ಸರಿದ ಕಾರಣ, ವಕೀಲರು ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಆದೇಶ ಪ್ರತಿ ತಲುಪಿಸಿದ್ರೂ, ಶ್ಯೂರಿಟಿ ನೀಡದ ಕಾರಣ, ರಿಲೀಸ್ ಆಗಲಿದ್ದಾರೆ. ಆ ಬಗ್ಗೆ ಕಾದು ನೋಡಬೇಕಿದೆ.

Related