ಯಶ್ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸರ್ಪ್ರೈಸ್

ಯಶ್ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸರ್ಪ್ರೈಸ್

ಬೆಂಗಳೂರು : ಕನ್ನಡ ಚಿತ್ರರಂಗದ ಕೆಜಿಎಫ್-2 ಚಿತ್ರೀಕರಣ ಸಿನಿಮಾ ಪೂರ್ಣಗೊಂಡಿದೆ. ರಾಕಿ ಬಾಯ್ ಯಶ್ ಅಭಿನಯದಲ್ಲಿ ಮೂಡಿಬಂದ ಕೆ.ಜಿ.ಎಫ್ ಸಿನಿಮಾ ಭಾರತೀಯ ಚಿತ್ರರಂಗವೇ ಸ್ಯಾಂಡಲ್ ವುಡ್ ನ ಕಡೆ ತಿರುಗಿ ನೋಡುವಂತೆ ಮಾಡಿತ್ತು. ಈ ಸಿನಿಮಾದ ಯಶಸ್ಸಿನ ಬಳಿಕ ಕೆ.ಜಿ.ಎಫ್ ಚಾಪ್ಟರ್-2 ಸೆಟ್ಟೇರಿದ್ದು ಕೋವಿಡ್ ಕಾರಣದಿಂದಾಗಿ ಚಿತ್ರೀಕರಣಕ್ಕೆ ತಡೆಯಾಗಿದೆ.

ಈ ಸಿನಿಮಾದಲ್ಲಿ ಹಲವಾರು ಬಹುಭಾಷಾ ಕಲಾವಿದರು ಬಣ್ಣ ಹಚ್ಚಿದ್ದು, ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಚಿತ್ರದ ನೆಗೆಟೀವ್ ಪಾತ್ರವಾದ ‘ಅಧೀರ‘ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಸಂಪೂರ್ಣ ಮುಕ್ತಾಯವಾಗಿದೆ.
ತುದಿಗಾಲಿನಲ್ಲಿರುವ ಪ್ರೇಕ್ಷಕರಿಗೆ  ಡಿ.21  ರಂದು ಅಚ್ಚರಿಯ ಸುದ್ದಿಯೊಂದನ್ನು ನೀಡಲಿದ್ದೇವೆ . ಈವರೆಗೂ ತಾಳ್ಮೆಯಿಂದ ಕಾದು ನಮ್ಮನ್ನು ಬೆಂಬಲಿಸಿರುವುದಕ್ಕೆ ಧನ್ಯವಾದಗಳು ಎಂದು ಚಿತ್ರತಂಡ ತಿಳಿಸಿದೆ.

ಚಿತ್ರದ ಟೀಸರ್ ಅನ್ನು ನಟ ಯಶ್ ಅವರ ಜನ್ಮದಿನವಾದ ಜನವರಿ 8 ರಂದು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿದೆ . ಚಿತ್ರದಲ್ಲಿ ರಮೀಕಾ ಸೇನ್ , ಶ್ರೀನಿಧಿ ಶೆಟ್ಟಿ , ಅನಂತ್ ನಾಗ್ , ವಸಿಷ್ಠ ಸೇರಿದಂತೆ ಹಲವು ತಾರೆಯರು ನಟಿಸಿದ್ದಾರೆ .

Related