ಮೈದುಂಬಿ ಹರಿಯುತ್ತಿರುವ ಎತ್ತಿಪೋತೆ

ಮೈದುಂಬಿ ಹರಿಯುತ್ತಿರುವ ಎತ್ತಿಪೋತೆ

ಚಿಂಚೋಳಿ : ಜಲಪಾತದ ಮೇಲ್ಭಾಗದ ತೆಲಂಗಾಣದಲ್ಲಿ ಸುರಿದ ಮಳೆಯಿಂದ ಎತ್ತಿಪೋತೆ ಜಲಪಾತ ಮರು ಜೀವ ಪಡೆದುಕೊಂಡಿದ್ದು ಶುಕ್ರವಾರ ಸುರಿದ ಭಾರಿ ಮಳೆಗೆ ಮೈದುಂಬಿ ಹರಿಯುತ್ತಿದೆ. ಇದರಿಂದ ಮೇಲಿಂದ ನೀರು ಬೀಳುವ ಎರಡು ತಾಣಗಳು ನಯನ ಮನೋಹರವಾಗಿ ಗೋಚರಿಸುತ್ತ ಪ್ರವಾಸಿಗರನ್ನು ಸೆಳೆಯುತ್ತಿವೆ.

ಇಲ್ಲಿ ಮೂರು ಕಡೆಗಳಲ್ಲಿ ನೀರು ಮೇಲಿಂದ ಕೆಳಗೆ ಬೀಳುವ ದೃಶ್ಯ ಮನಸ್ಸಿಗೆ ಮುದ ನೀಡಲಿದೆ. ದಟ್ಟ ಕಾಡಿನ ಮಧ್ಯೆ ಇರುವ ಈ ಜಲಪಾತಕ್ಕೆ ಒಬ್ಬರೇ ಹೋಗುವುದು ಅಪಾಯಕಾರಿ ಜತೆಗೆ ಇದೇ ಕಾಡಿನಲ್ಲಿ ಚಿರತೆ ಗೋಚರಿಸಿದ್ದರಿಂದ ಪ್ರವಾಸಿಗರು ಎಚ್ಚರಿಕೆ ವಹಿಸಬೇಕೆಂದು ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ಪರಿಸರ ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ.

ಮಹಾ ಮಳೆಯಿಂದ ಚಂದ್ರಪಳ್ಳಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ ಕೆಲವೇ ಗಂಟೆಗಳಲ್ಲಿ 2 ಮೀಟರ್ ನೀರು ಹರಿದು ಬಂದಿದೆ ಎಂದು ಸಿದ್ದಾರೂಢ ಹೊಕ್ಕುಂಡಿ ತಿಳಿಸಿದ್ದಾರೆ

Related